ನಿನ್ನೆ ಮಳೆ ಬಂದಿದೆ, 8 ಸಾವಿರ ಕ್ಯುಸೆಕ್ ನೀರು ಬರ್ತಿದೆ : ಡಿ.ಕೆ ಶಿವಕುಮಾರ್

ಬೆಂಗಳೂರು : ನಮ್ಮ ರೈತರನ್ನ ಇಲ್ಲಿಯವರೆಗೂ ಕಾಪಾಡಿಕೊಂಡು ಬಂದಿದ್ದೇವೆ. ನಮಗಿರೋ ಬರವನ್ನ ನಾವು ತಿಳಿಸಿದ್ದೇವೆ. ಕೇಂದ್ರ ಅಧಿಕಾರ ತಂಡ ಬಂದು ಅಧ್ಯಯನ ಮಾಡಿಕೊಂಡು ಹೋಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾನಾಡಿರುವ ಅವರು, ನಿನ್ನೆ ಮಳೆ ಬಂದಿದೆ. 8 ಸಾವಿರ ಕ್ಯುಸೆಕ್ ನೀರು ಬರ್ತಿದೆ. ತಮಿಳುನಾಡು ಸರ್ಕಾರ ನಿರ್ಣಯ ಮಾಡಿಕೊಂಡಿದ್ದಾರೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ತಿಳಿಸಿದರು.

ಮೇಕೆದಾಟು ಯೋಜನೆ ಸಂಬಂಧಿಸಿದಂತೆ. ಈಗಾಗಲೇ ಜಾಗ ಗುರುತಿಸಲಾಗುತ್ತಿದೆ. ಅರಣ್ಯದಲ್ಲಿ ಆನೆ ಹಾಗೂ ಚಿರತೆ ಹಾವಳಿ ಹೆಚ್ಚಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಬೆಂಗಳೂರು ಸುತ್ತಮುತ್ತಲೇ ಸಮಸ್ಯೆ ಎದುರಾಗಿದೆ. ಅರಣ್ಯ ಇಲಾಖೆಯಿಂದ ಗಾರ್ಡ್ ಹಾಕಿ ಕೊಡೋದಾಗಿ ಹೇಳಿದ್ದಾರೆ. ಫಾರೆಸ್ಟ್ ಅವರು ಲಿಬರಲ್ ಆಗಬೇಕು. ಜಲಮಂಡಳಿ ಕಾರ್ಯ ನೂರು ಮೀಟರ್ ನಿಲ್ಲಿಸಿದ್ದಾರೆ. ಜಲಮಂಡಳಿ ಪೈಪ್ ಹಾಕಲು ಅವಕಾಶ ಕೊಡುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

ಅವ್ರು ಮೊದಲು ಧರಣಿ ಕೂರಲಿ

ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಅನುಧಾನ ಕಡಿತ ವಿಚಾರವಾಗಿ ಶಾಸಕ ಮುನಿರತ್ನ ಪ್ರತಿಭಟನೆ ಕೂರಲು ಮುಂದಾಗಿರುವ ಬಗ್ಗೆ ಮಾತನಾಡಿದ ಅವರು, ಅವರು ಮೊದಲು ಧರಣಿ ಕೂರಲಿ. ಅದನ್ನ ಮೊದಲು ಮಾಡಲಿ. ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲೇ ನಾವು ಮಾಡುತ್ತಿದ್ದೇವೆ ಎಂದು ಡಿ.ಕೆ ಶಿವಕುಮಾರ್ ಕುಟುಕಿದರು.

RELATED ARTICLES

Related Articles

TRENDING ARTICLES