5 ವರ್ಷಗಳ ಬಳಿಕ ಮೈಸೂರು ದಸರಾದಲ್ಲಿ ಏರ್ ಶೋ

ಮೈಸೂರು : ಪಂಜಿನ ಕವಾಯತ ಮೈದಾನದಲ್ಲಿ ಅಕ್ಟೋಬರ್​ 22 ಹಾಗೂ 23ರಂದು ದಸರಾ ಏರ್​ ಶೋ ನಡೆಯಲಿದೆ ಎಂದು ಮೈಸೂರಿನಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

5 ವರ್ಷಗಳ ಬಳಿಕ ಮೈಸೂರು ದಸರಾದಲ್ಲಿ ಏರ್​ಶೋ ನಡೆಯುತ್ತಿದೆ. ಅ.22ರಂದು ಏರ್ ​ಶೋ ರಿಹರ್ಸಲ್, 23ರಂದು ಮುಖ್ಯ ಏರ್ ​ಶೋ ನಡೆಯಲಿದೆ. ಅ.23ರ ಸಂಜೆ 4 ಗಂಟೆಗೆ 45 ನಿಮಿಷ ಏರ್​ಶೋ ನಡೆಯಲಿದೆ ಎಂದು ಹೇಳಿದ್ದಾರೆ.

ಅಕ್ಟೋಬರ್ 18 ರಿಂದ 21 ರವರೆಗೆ ಯುವ ದಸರಾ ನಡೆಯಲಿದೆ. ನಟ ಶಿವರಾಜ್ ಕುಮಾರ್, ಹಿನ್ನೆಲೆ ಗಾಯಕ ಸಂಚಿತ್  ಹೆಗ್ಡೆ ಮತ್ತು ತಂಡ ಯುವ ದಸರಾದಲ್ಲಿ ಭಾಗಿಯಾಗಲಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಯುವ ದಸರಾ ಸಂಭ್ರಮ 4 ದಿನಗಳ ಕಾಲ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಉದ್ಘಾಟಿಸಲಿದ್ದಾರೆ.

ಸಂಗೀತ ರಸದೌತಣ

ಸಂಜೆ 6.30 ರಿಂದ ರಾತ್ರಿ 10.30 ರವರಿಗೆ ಯುವ ದಸರಾ ನಡೆಯಲಿದೆ. ಮೊದಲ ದಿನ ಸಾಧು ಕೋಕಿಲ ಮತ್ತು ತಂಡದಿಂದ ಸಂಗೀತದ ರಸದೌತಣ ಇರಲಿದೆ. ಕನ್ನಡ ರ್ಯಪರ್ ಅಲೋಕ್ (All ok) ತಂಡದಿಂದ ಸಂಗೀತ ಕಾರ್ಯಕ್ರಮ ಇರಲಿದೆ. ಬಾಲಿವುಡ್ ಹಾಡುಗಾರರು ಕೂಡ ಈ ಬಾರಿ ಯುವ ದಸರಾದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಸ್ಥಳೀಯ ಪ್ರತಭೆಗಳಿಗೂ ಈ ಬಾರಿ ಯುವ ದಸರಾ ಸಂಭ್ರಮದಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ.

RELATED ARTICLES

Related Articles

TRENDING ARTICLES