ದಾವಣಗೆರೆ ಜನತೆಗೆ ಬೆಂಬಿಡದೆ ಕಾಡುತ್ತಿರುವ ಚಿರತೆಗಳು

ದಾವಣಗೆರೆ : ಜಿಲ್ಲೆಯ ಜನರಿಗೆ ಬೆಂಬಿಡದೆ ಕಾಡುತ್ತಿರುವ ಚಿರತೆ ಹಿನ್ನೆಲೆ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿರುವ ಘಟನೆ ಹರಿಹರ ತಾಲೂಕಿನ ಜಿ.ಟಿ ಕಟ್ಟಿ ಗ್ರಾಮದಲ್ಲಿ ನಡೆದಿದೆ.

ಈ ಹಿಂದೆ ನ್ಯಾಮತಿ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಚಿರತೆ ಸೆರೆ ಹಿಡಿದಿದ್ದ ಅರಣ್ಯ ಇಲಾಖೆ. ಅದರ ಬೆನ್ನಲ್ಲೇ ಜಿ.ಟಿ ಕಟ್ಟಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಬೀದಿ ನಾಯಿಗಳ ಮೇಲೆ ದಾಳಿ ಮಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಈ ಘಟನೆ ಹಿನ್ನೆಲೆ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದು, ಜಮೀನು ಕೆಲಸಕ್ಕೆ ಹೋಗುವ ರೈತರಲ್ಲಿ ಭಯದ ವಾತವರಣ ಮನೆ ಮಾಡಿದೆ. ಹಾಗೂ ಚಿರತೆಯ ಭಯದಿಂದ ಮಕ್ಕಳನ್ನು ಹೊರಗೆ ಬಿಡಲು ಹೆದರುವ ಸನ್ನಿವೇಶ ಉಂಟಾಗಿದೆ.

ಇದನ್ನು ಓದಿ : ಮಿನಿ ಲಾರಿ,ಕಾರು,ಬಸ್ಸಿನ ನಡುವೆ ಸರಣಿ ಅಪಘಾತ; ಕಾರು ಚಾಲಕ ಪಾರು

ಅದರಿಂದ ಚನ್ನಗಿರಿ, ಹೊನ್ನಾಳಿ ಮತ್ತು ಹರಿಹರ ಭಾಗದಲ್ಲಿ ಹೆಚ್ಚಾಗಿ ಚಿರತೆಗಳು ಕಂಡು ಬರುತ್ತಿರುವ ಹಿನ್ನೆಲೆ ರಾತ್ರಿ ವೇಳೆ ಯಾರೂ ಹೊರಗಡೆ ಓಡಾಡದಂತೆ ಅರಣ್ಯ ಅಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ.

RELATED ARTICLES

Related Articles

TRENDING ARTICLES