ಶಿವಮೊಗ್ಗ : ಜಗದೀಶ್ ಶೆಟ್ಟರ್ ಅವರಿಗೆ ಇದೇ ಬದುಕು. ಅವರಿಗೆ ಸ್ಥಾನ ಸಿಗಲಿಲ್ಲ. ಹೀಗಾಗಿ, ಬಕೆಟ್ ಹಿಡಿಯೋರಿಗೆ ಅವಕಾಶ ಅಂದ್ರು. ಯಾವ ಬಕೆಟ್ ಹಿಡಿದು ನೀವು ಸಿಎಂ ಆಗಿದ್ರಿ? ಯಾವ ಬಕೆಟ್ ಹಿಡಿದು ನಿಮ್ಮ ತಮ್ಮ ಎಂಎಲ್‌ಸಿ ಆಗಿದ್ದ? ಎಂದು ಶೆಟ್ಟರ್ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಬೆಂಕಿಯುಗುಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ‘ನನಗೆ ಅವಕಾಶ ಸಿಕ್ಕರೆ ಬಿಜೆಪಿ ಒಳ್ಳೆಯದು, ಸಿಗಲಿಲ್ಲವಾ? ಬಿಜೆಪಿ ಏನು ಉಪಯೋಗ ಇಲ್ಲ ರೀ.. ಇದು ಸರ್ವಾಧಿಕಾರಿ ಪಕ್ಷ, ನಾಲ್ಕು ಜನ ಇಟ್ಕೊಂಡು ನಡೆಸುತ್ತಾರೆ ಅಂತ ಹೇಳ್ತಾರೆ. ಇದು ಆ ವ್ಯಕ್ತಿಗಳ ಮನೋ ದೌರ್ಬಲ್ಯವನ್ನು ತೋರಿಸುತ್ತದೆ. ಇವ್ರು ಸಿಎಂ ಆಗಿದ್ದಾಗ ಅವರು ಅವಕಾಶವಾದಿಗಳಲ್ವಾ?’ ಎಂದು ಗುಡುಗಿದರು.
ಒಂದು ಕೋಟಿ ಸದಸ್ಯರಿದ್ದಾರೆ
ಸೀಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಕೆಲವರು ಹೋದ್ರು. ರಾಜ್ಯದಲ್ಲಿ ಬಿಜೆಪಿಗೆ ಒಂದು ಕೋಟಿ ಸದಸ್ಯರಿದ್ದಾರೆ. ಎಲ್ಲರೂ ನಿಷ್ಠಾವಂತ ಕಾರ್ಯಕರ್ತರೇ. ಎಲ್ಲರಿಗೂ ಸೀಟ್ ಕೊಡೋಕೆ ಬರುತ್ತೇನು? ಇವರಾದ್ರೂ ಎಂಎಲ್ಎ ಅದ್ರೂ, ಒಂದು ಸರಿನೂ ಎಂಎಲ್ಎ ಆಗದವರು ಎಷ್ಟು ಜನ ಇದ್ದಾರೆ? ಅರ್ಥ ಮಾಡಿಕೊಳ್ಳಬೇಕು. ಎಲ್ಲಾ ಅಧಿಕಾರನೂ ನನಗೆ ಬೇಕು ಅಂದ್ರೆ ಹೇಗೆ? ಎಂದು ಚಾಟಿ ಬೀಸಿದರು.
ಅವಕಾಶವಾದಿ ತರ ಕಾಣಿಸಿದ್ವಿ
ಯಾವಾಗ ಇವರಿಗೆ ಎಂಎಲ್ಎ ಟಿಕೆಟ್ ಸಿಗಲ್ಲ ಅಂತ ದೆಹಲಿಯಿಂದ ಕಾಲ್ ಬಂತೋ. ಆಗ ಅವರಿಗೆ ನಾವೆಲ್ಲ ಅವಕಾಶವಾದಿಗಳ ತರ ಕಾಣಿಸಿದ್ವಿ. ಇರಲಿ.. ರಾಜ್ಯದ ಜನ ತೀರ್ಮಾನ ಮಾಡ್ತಾರೆ ಎಂದು ಜಗದೀಶ್ ಶೆಟ್ಟರ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.


