ಶಿವಮೊಗ್ಗ : ಚಲಿಸುತ್ತಿದ್ದ ಬೈಕ್ ಮತ್ತು ಟ್ಯಾಂಕರ್ ಡಿಕ್ಕಿಯಾಗಿ ಇಬ್ಬರು ವ್ಯಕ್ತಿಗಳಿಗೆ ಗಂಭೀರ ಗಾಯ ಘಟನೆ ಜಿಲ್ಲೆಯ ಹೊಸನಗರ ಪಟ್ಟಣದ ಕೆಇಬಿ ಸರ್ಕಲ್ ಬಳಿ ನಡೆದಿದೆ.
ಲೋಕಪ್ಪ ಗೌಡ ಎಂಬುವವರು ಹೊಸನಗರದಿಂದ ಸುತ್ತತೆಂಕಬೈಲ್ ಕಡೆಗೆ ತಮ್ಮ ರಾಯಲ್ ಎನ್ಪೀಲ್ಡ್ ಬುಲೆಟ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಮಂಗಳೂರಿನಿಂದ ಶಿವಮೊಗ್ಗ ಕಡೆ ಹೋಗುತ್ತಿದ್ದ ಟ್ಯಾಂಕರ್ ಒಂದಕ್ಕೆ ಏಕಾಏಕಿ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಇದನ್ನು ಓದಿ : ನೀರಿಗಾಗಿ ಹಾಹಾಕಾರ; ಪಾಚಿ ಕಟ್ಟಿದ ನೀರು ಕುಡಿಯುತ್ತಿರುವ ಗ್ರಾಮಸ್ಥರು
ಈ ಅಪಘಾತ ಪರಿಣಾಮ ಬೈಕ್ನಲ್ಲಿದ್ದ ಲೋಕಪ್ಪ ಗೌಡ ಅವರಿಗೆ ಹಾಗೂ ಇನ್ನೊಬ್ಬ ವ್ಯಕ್ತಿಗೆ ಗಂಭೀರ ಗಾಯಗೊಂಡಿದ್ದಾರೆ. ಘಟನೆ ಬಳಿಕ ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.


