ರಾಯಚೂರು : 15 ದಿನಗಳಿಂದ ಕುಡಿಯುವ ನೀರಿಲ್ಲದೆ ಪರದಾಡುತ್ತಿರುವ ಗ್ರಾಮಸ್ಥರು ಘಟನೆ ತಾಲೂಕಿನ ಬೆಚ್ಚಾಲಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಬಹುಗ್ರಾಮಗಳಲ್ಲಿ ಕುಡಿಯುವ ನೀರಿಲ್ಲದೆ ಒದ್ದಾಡುತ್ತಿರುವ ಜನರು. ಜಿಲ್ಲೆಯಲ್ಲಿ ಕಲುಷಿತ ನೀರು ಘಟನೆ ಮೇಲಿಂದ ಮೇಲೆ ಜರುಗುತ್ತಿದ್ದರು ಕ್ರಮ ತೆಗೆದುಕೊಳ್ಳದ ಅಧಿಕಾರಿಗಳು. ಈ ಹಿನ್ನೆಲೆ ಕೂಗುಳುತ ದೂರದಲ್ಲಿ ತುಂಗಾಭದ್ರಾ ನದಿ ಇದ್ದರು ಕುಡಿಯುವ ನೀರಿಗಾಗಿ ಹಾಹಾಕಾರ ನಡೆಯುತ್ತಿದೆ.
ಇದನ್ನು ಓದಿ : ಶ್ರಾವಣ ಶುಕ್ರವಾರ ಸಂಭ್ರಮ ; ಶ್ರೀ ರೇಣುಕಾಂಬ ದೇವಿ ದರ್ಶನ ಪಡೆದ ಭಕ್ತರು
ಕುಡಿಯುವ ನೀರಿಗಾಗಿ ಬೇರೆ ವಿಧಿಯಿಲ್ಲದೆ ಪಾಚಿ ಕಟ್ಟಿದ್ದ ನೀರನ್ನು ಕುಡಿಯುತ್ತಿದ್ದಾರೆ. ಅಷ್ಟೇ ಅಲ್ಲದೆ 18 ಹಳ್ಳಿಗಳಿಗೆ ಕುಡಿಯುವ ನೀರಿನ ಸರಬರಾಜಿಗಾಗಿ ಸಿದ್ಧವಾದ ಕುಡಿಯುವ ನೀರು ಘಟಕ. ಆದರೆ ಘಟಕಕ್ಕೆ ನೀರಿನ ಸರಬರಾಜು ಮಾತ್ರ ನಡೆಯುತ್ತಿಲ್ಲ. ಬರುವ ಲಕ್ಷಾಂತರ ರೂಪಾಯಿ ಅನುದಾನ ಬಂದರು ಸಹ, ನೀರಿನ ಯೋಜನೆ ಮಾತ್ರ ಸಂಪೂರ್ಣ ವಿಫಲ.
ಈ ಘಟನಾ ಹಿನ್ನೆಲೆ ಹಲವು ಭಾರಿ ಗುತ್ತಿಗೆದಾರರ ಬಳಿ ನೀರಿನ ಸಮಸ್ಯೆ ಬಗೆಹರಿಸಲು ಕೇಳಿಕೊಂಡರೆ, ಗ್ರಾಮಸ್ಥರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಅಧಿಕಾರಿಗಳ ಚೆಲ್ಲಾಟದಿಂದ ಗ್ರಾಮಸ್ಥರಿಗೆ ಪ್ರಾಣ ಸಂಕಟವಾಗುತ್ತಿದೆ. ಬೇರೆ ಗತಿಯಿಲ್ಲದೆ ಗುತ್ತಿಗೆದಾರರ ಭಯದಿಂದ ಕೆಲಸ ಕಾರ್ಯಗಳನ್ನು ಬಿಟ್ಟು, ಪಾಚಿ ಕಟ್ಟಿದ್ದ ನೀರನ್ನೇ ಸೇವಿಸುತ್ತಿರುವ ಗ್ರಾಮದ ಜನರು.


