ರಾಷ್ಟ್ರ ವಿರೋಧಿಯಾಗಿ ಬೆಳೆಯುತ್ತಿದೆ ಕಾಂಗ್ರೆಸ್: ನಳಿನ್ ಕುಮಾರ್ ಕಟೀಲ್

ಶಿವಮೊಗ್ಗ: ಕಾಂಗ್ರೆಸ್ ಯಾವಾಗಲೂ ಗಲಭೆ ಎಬ್ಬಿಸುವುದಕ್ಕೆ ಕಾಯುತ್ತಿದ್ದು, ರಾಷ್ಟ್ರ ವಿರೋಧಿಯಾಗಿ ಬೆಳೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜಿಲ್ಲಾ ಸಮಿತಿ ವಿಶೇಷ ಸಭೆಯಲ್ಲಿ ಮಾತನಾಡಿ ಹೇಳಿದ್ದಾರೆ.

ಇದೀಗ ಪೌರತ್ವ ವಿಚಾರದಲ್ಲಿ ಕಾಂಗ್ರಸ್ ಗಲಭೆ ಮಾಡಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದು, ದೇಶದೆಲ್ಲೆಡೆ  ಭಯೋತ್ಪಾದನೆಯನ್ನು ಹುಟ್ಟಿ ಹಾಕುತ್ತಿದೆ. ಇನ್ನು ಅಧಿಕಾರ ಇದ್ದಾಗ ಪ್ರಜಾಪ್ರಭುತ್ವದ ಕಗ್ಗೋಲೆಯಾದರೆ. ಅಧಿಕಾರ ಇಲ್ಲದಿದ್ದಾಗ ಗಲಭೆ ಸೃಷ್ಟಿಸುವ ಯೋಚನೆಯಲ್ಲಿರುತ್ತದೆ ಎಂದು ಟೀಕಿಸಿದ್ದಾರೆ.

RELATED ARTICLES

Related Articles

TRENDING ARTICLES