ಜಮೀನಿನ ವಿಚಾರಕ್ಕೆ ತಮ್ಮನನ್ನೆ ಕೊಚ್ಚಿದ ಅಣ್ಣ

ರಾಮನಗರ:

ಜಮೀನು ವಿಚಾರವಾಗಿ ಅಣ್ಣ ತಮ್ಮ ನ ಮಧ್ಯೆ ಗಲಾಟೆ  ನೆಡೆದಿದೆ.

ನೆಸೆಪಾಳ್ಯ ಗ್ರಾಮಾದಲ್ಲಿ ವಾಸವಾಗಿದ್ದ ನಾಗರಾಜು (34) (ಕೊಲೆಯಾದ ವ್ಯಕ್ತಿ), ಮತ್ತು ಅವರ ಅಣ್ಣ ರಾಮಚಂದ್ರ ಎಂಬುವವರ ನಡುವೆ ಮಾರಾಮಾರಿ ಆಗಿದೆ,  ಅವರ ಇಬ್ಬರ ಮಧ್ಯೆ ಜಮೀನಿನ ವಿಷಯದಲ್ಲಿ ಕಿರಿಕಿರಿ ಇದ್ದು ಇಂದು ಬೆಳಗ್ಗೆ ಜಮೀನಿನಲ್ಲಿ ಕೆಲಸ ಮಾಡಲು ಎಂದು ಹೋದ ಸಮಯದಲ್ಲಿ ಅವರ ಅಣ್ಣ ತರಲೆಯನ್ನು ತೆಗೆದು ಇಬ್ಬರು ಜಗಳಕ್ಕೆ ಮುಂದಾಗಿದ್ದಾರೆ.

ಇದನ್ನು ಓದಿ: ಇಂದಿರಾ ಕ್ಯಾಂಟಿನ್ ಗೆ 100 ಕೋಟಿ ರೂಪಾಯಿ ಅನುದಾನ ಸಿಎಂ ಸಿದ್ಧರಾಮಯ್ಯ

ಜಗಳವಾಡುವ ಸಂದರ್ಭದಲ್ಲಿ ಅಲ್ಲೆ ಇದ್ದ ಮಚ್ಚಿನಿಂದ ಕೊಚ್ಚಿ ತಮ್ಮನನ್ನೆ ಕೊಲೆ ಮಾಡಲು ಮುಂದಾಗುತ್ತಾನೆ, ಮಚ್ಚಿನಿಂದ ಕೊಚ್ಚಿದ ನಂತರ ಅವರ ಅಣ್ಣ ರಾಮಚಂದ್ರ ತಾನೇ ಹೋಗಿ ಮಾಗಡಿ ಪೋಲಿಸ್ ಠಾಣೆಗೆ ಹಾಜರಾಗುತ್ತಾನೆ.

ನಂತರ ಪೋಲಿಸರು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನೆಡೆಸಿ, ರಾಮಚಂದ್ರನನ್ನು ಅರೆಸ್ಟ್ ಮಾಡುತ್ತಾರೆ. ಮಾಗಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES