Monday, August 25, 2025
Google search engine
HomeUncategorizedನಮ್ಮಲ್ಲಿ Dont Disturb ಅಂತ ಗದರಿಸುವ ಸಂಸ್ಕೃತಿ ಇಲ್ಲ : ಶಾಸಕ ಯತ್ನಾಳ್

ನಮ್ಮಲ್ಲಿ Dont Disturb ಅಂತ ಗದರಿಸುವ ಸಂಸ್ಕೃತಿ ಇಲ್ಲ : ಶಾಸಕ ಯತ್ನಾಳ್

ವಿಜಯಪುರ : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಅಬ್ಬರಿಸಿದ್ದ ಯತ್ನಾಳರಿಗೆ ನೋಟಿಸ್ ಯಾಕೆ ಇಲ್ಲ ಎಂದಿದ್ದ ಕಾಂಗ್ರೆಸ್ ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಕ್ಕರ್ ಕೊಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ನಮ್ಮ ಪಕ್ಷದ ಆಂತರಿಕ ವಿಚಾರ ನಿಮಗೆ ಏನು ಸಂಬಂಧ? ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದು ತಿರುಗೇಟು ಕೊಟ್ಟಿದ್ದಾರೆ.

ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ (Internal Democracy) ಇದೆ, Dont Disturb ಅಂತ ಗದರಿಸುವ ಸಂಸ್ಕೃತಿ ಇಲ್ಲ. ನನ್ನನ್ನು ಟ್ಯಾಗ್ ಮಾಡಿದ್ರೆ ಜಾಡಿಸ್ತೀನಿ ಅಂತ, ಹೆಸರು ಬರೆದು ತಪ್ಪಿಸಿಕೊಳ್ಳುವ  ಪ್ರಯತ್ನ ಮಾಡಬೇಡಿ. ನಿಮ್ಮ ಮಹದೇವಪ್ಪನಿಗೆ, ಕಾಕಪಾಟಿಲನಿಗೆ ಕೊಟ್ಟಿದ್ದ ಮಾತು ಪೂರೈಸಲು ಕೆಲಸ ಮಾಡಿ ಎಂದು ಛೇಡಿಸಿದ್ದಾರೆ.

ಇದನ್ನೂ ಓದಿ : ತಿಹಾರ್ ಇಂದ ಬಂದವರೂ ನಾಯಕರಾಗಬಹುದು : ಶಾಸಕ ಯತ್ನಾಳ್ ಟಾಂಗ್

ಶಿಸ್ತಿನ ಪಾಠ BSY ಬ್ರಿಗೇಡ್ ಗೆ ಮಾತ್ರವೇ?

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಮಾತನಾಡಿದ ಸಂಸದ ಪ್ರತಾಪ್ ಸಿಂಹರಿಗೆ ಶಿಸ್ತುಕ್ರಮದ ನೋಟಿಸ್ ಇಲ್ಲ. ಬಿಜೆಪಿಯಲ್ಲಿ ಶಿಸ್ತಿನ ಪಾಠ ಕೇವಲ BSY ಬ್ರಿಗೇಡ್ ಗೆ ಮಾತ್ರವೇ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಅಬ್ಭರಿಸಿದ್ದ ಯತ್ನಾಳರಿಗೆ ನೋಟಿಸ್ ಇಲ್ಲ. ನಿರಾಣಿ ವಿರುದ್ಧ ಮಾತನಾಡಿದವರಿಗೆ ನೋಟಿಸ್ ಇಲ್ಲ. ಬಿಜೆಪಿಯಲ್ಲಿ ಲಿಂಗಾಯತ ನಾಯಕತ್ವವನ್ನು ಹಾಗೂ ಬಿಎಸ್ ವೈ ಬೆಂಬಲಿಗರನ್ನು ಸಂಪೂರ್ಣ ಮುಗಿಸಿಹಾಕಲು ಸಂತೋಷ ಕೂಟ ಪಣ ತೊಟ್ಟಿದೆ ಎಂದು ಕುಟುಕಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments