ಬೆಂಗಳೂರು : ಉಚಿತ ವಿದ್ಯುತ್ ಬಗ್ಗೆ ಜನರಿಗೆ ಇನ್ನೂ ಸಾಕಷ್ಟು ಗೊಂದಲ ಇದೆ. ಈ ಗೊಂದಲಗಳಿಗೆ ಇಲ್ಲಿದೆ ಉತ್ತರ.
ಈ 200 ಯುನಿಟ್ ಉಚಿತ ವಿದ್ಯುತ್ ಸೌಲಭ್ಯ ಪಡೆಯುವುದು ಹೇಗೆ? ಸ್ವಂತ ಮನೆ ಇರುವವರು, ಬಾಡಿಗೆ ಮನೆಯಲ್ಲಿರುವವರು ಏನು ಮಾಡಬೇಕು? ಯಾವ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್.
⦁ ಸ್ವಂತ ಮನೆ ಇರುವವರು ಏನು ಮಾಡಬೇಕು?
- ಸೇವಾ ಸಿಂಧು ಪೊರ್ಟಲ್ ಮೂಲಕ (https://sevasindhu.karnataka.gov.in) ಅರ್ಜಿ ಸಲ್ಲಿಸಬೇಕು.
- ಆರ್.ಆರ್ ನಂಬರ್ ನೊಂದಿಗೆ ಆಧಾರ್ ಲಿಂಕ್ ಮಾಡಬೇಕು
- ಒಬ್ಬರು ಒಂದಕ್ಕಿಂತ ಹೆಚ್ಚು ಮನೆ ಹೊಂದಿದ್ದರೆ, ಒಂದು ಮನೆಗೆ ಮಾತ್ರ ಫ್ರೀ ವಿದ್ಯುತ್
- ಎರಡು ಮೀಟರ್ ಇದ್ರೆ, ಒಂದಕ್ಕೆ ಮಾತ್ರ ಫ್ರೀ ವಿದ್ಯುತ್ ಲಭ್ಯ
ಇದನ್ನೂ ಓದಿ : ಆತಂಕ ಬೇಡ : ಬಾಡಿಗೆದಾರರಿಗೂ 200 ಯುನಿಟ್ ಫ್ರೀ ವಿದ್ಯುತ್
⦁ ಬಾಡಿಗೆ ಮನೆಯಲ್ಲಿರುವವರು ಏನು ಮಾಡಬೇಕು?
- ವಾಸವಿರುವ ಮನೆಯ ಆರ್ಆರ್ ನಂಬರ್ನೊಂದಿಗೆ ಆಧಾರ್ ಲಿಂಕ್ ಆಗಿರಬೇಕು.
- ಇನ್ನು ಬಾಡಿಗೆ ಮನೆಯ ಕರಾರು ಪತ್ರ( ಅಗ್ರಿಮೆಂಟ್ ಪೇಪರ್)ವನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು.
- ಒಂದು ದಾಖಲೆಯನ್ನು ಒಂದು ಮೀಟರ್ನೊಂದಿಗೆ ಮಾತ್ರ ಲಿಂಕ್ ಮಾಡುವುದಕ್ಕೆ ಅವಕಾಶವಿರಲಿದೆ.
- ಮನೆ ಬದಲಾಯಿಸಿದರೆ, ಹಿಂದಿನ ಮನೆಯ ಮೀಟರ್ನೊಂದಿಗೆ ಇರೋ ಲಿಂಕ್ ತೆಗೆಯಬೇಕು.
- ಹೊಸ ಬಾಡಿಗೆ ಮನೆಯ ಆರ್ಆರ್ ನಂಬರ್ ಮತ್ತು ಆಧಾರ್ ಕಾರ್ಡ್ ಪುನಃ ಲಿಂಕ್ ಮಾಡಬೇಕು.
- ರಜನಿ, ಪವರ್ ಟಿವಿ


