Tuesday, August 26, 2025
Google search engine
HomeUncategorizedಮೇಲೂರು, ಮಳ್ಳೂರಲ್ಲಿ ಸೀಕಲ್ ರಾಮಚಂದ್ರ, ಧ್ರುವ ಸರ್ಜಾಗೆ ಭರ್ಜರಿ ವೆಲ್ಕಮ್

ಮೇಲೂರು, ಮಳ್ಳೂರಲ್ಲಿ ಸೀಕಲ್ ರಾಮಚಂದ್ರ, ಧ್ರುವ ಸರ್ಜಾಗೆ ಭರ್ಜರಿ ವೆಲ್ಕಮ್

ಬೆಂಗಳೂರು : ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ ಇಂದು ಶಿಡ್ಲಘಟ್ಟ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಪರ ಭರ್ಜರಿ ಕ್ಯಾಂಪೇನ್ ಮಾಡಿದರು.

ಮೊದಲಿಗೆ ಹೆಚ್ ಕ್ರಾಸ್ ನ ಶ್ರೀಸೀತಾ ರಾಮರ ದೇವಾಲಯದಿಂದ‌ ಶುರು ಮಾಡಿದ ರೋಡ್ ಶೋನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗಿ ಆದರು. ನಂತರ ಹೆಚ್ ಕ್ರಾಸ್ ಮುಗಿಸಿ, ಜಂಗಮಕೋಟೆ, ಮೇಲೂರು, ಶಿಡ್ಲಘಟ್ಟದಲ್ಲಿ ಮತಬೇಟೆ ನಡೆಸಿದರು.

ಕೊನೆಯ ಹಂತದ ಪ್ರಚಾರದಲ್ಲಿರುವ ಸೀಕಲ್, ಇಂದು ಪ್ಯಾನ್ ಇಂಡಿಯಾ ಮಾರ್ಟಿನ್‌ ಧ್ರುವ ಸರ್ಜಾ ಜೊತೆ ಶಿಡ್ಲಘಟ್ಟದ ಸಾಕಷ್ಟು ಊರುಗಳಲ್ಲಿ ಬಿರುಸಿನ ಪ್ರಚಾರ ಮಾಡಿದರು. ಮೇಲೂರು, ಮಳ್ಳೂರಿನಲ್ಲಿ ಸೀಕಲ್ ರಾಮಚಂದ್ರ ಗೌಡರಿಗೆ ಅಪಾರ ಜನ ಬೆಂಬಲ ವ್ಯಕ್ತವಾಯಿತು. ಸೀಕಲ್ ರಾಮಚಂದ್ರ ಗೌಡರಿಗೆ ಧ್ರುವ ಸರ್ಜಾ ಹಾಗೂ ಮಾಜಿ ಶಾಸಕ ರಾಜಣ್ಣ ಸಾಥ್ ನೀಡಿದರು.

ಇದನ್ನೂ ಓದಿ : ಶಿಡ್ಲಘಟ್ಟದಲ್ಲಿ ‘ಕಮಲ ಅರಳುವುದು ಖಚಿತ’ : ಸೀಕಲ್ ರಾಮಚಂದ್ರಗೌಡ ವಿಶ್ವಾಸ

ಕ್ರ.ಸಂ.4 ರಾಮಣ್ಣನಿಗೆ ವೋಟ್​ ಹಾಕು

ಈ ಮಧ್ಯೆ ಪವರ್ ಟಿವಿ ಜೊತೆ ಮಾತನಾಡಿದ ಧ್ರುವ ಸರ್ಜಾ, ರಾಮಚಂದ್ರ ಗೌಡರು ನಮ್ಮ ಮಾವ ಅರ್ಜುನ್ ಸರ್ಜಾಗೆ ಆಪ್ತರು. ಹಾಗಾಗಿ ಇಂದು ಅವ್ರ ಪರ ಕ್ಯಾಂಪೇನ್ ಗೆ ಬಂದೆ. ಕ್ರಮ ಸಂಖ್ಯೆ 4. ರಾಮಣ್ಣನಿಗೆ ವೋಟ್​ ತಪ್ಪದೇ ವೋಟ್ ಹಾಕು ಎಂದು ಹೇಳಿದರು.

ಇದೇ ಮೊದಲ ಬಾರಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಪ್ರಬಲ ಪೈಪೋಟಿ ನೀಡುತ್ತಿದ್ದು, ಕಮಲ ಅರಳುವ ಎಲ್ಲಾ ಲಕ್ಷಣಗಳನ್ನು ತೋರಿದೆ. ಬಿಜೆಪಿ ರಾಷ್ಟ್ರೀಯ ನಾಯಕರಾದ ಜೆ.ಪಿ ನಡ್ಡಾ, ಸಚಿವ ಸುಧಾಕರ್, ಸಂಸದ ಮುನಿಸ್ವಾಮಿ ಸೇರಿದಂತೆ ಹಲವು ನಾಯಕರ ಆಗಮನದಿಂದ ಶಿಡ್ಲಘಟ್ಟ ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments