ಮತ್ತೆ ಒಂದಾಗ್ತಿದ್ದಾರೆ ‘ಚಮಕ್’ ಜೋಡಿ..!

ಸ್ಯಾಂಡಲ್​ವುಡ್​ನ ‘ಚಮಕ್​ ‘ ಜೋಡಿ ಮತ್ತೆ ಒಂದಾಗ್ತಿದ್ದಾರೆ. ‘ಚಮಕ್​ ‘ ಅಂದಕೂಡಲೇ ಥಟ್ ಅಂತ ನೆನಪಾಗುವುದು ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ. ಸದ್ಯ ಚಮಕ್ ಜೋಡಿ ಒಂದಾಗ್ತಿದೆ ಅನ್ನೋ ಸುದ್ದಿ ಬಂದ ಕೂಡಲೇ ಎಲ್ಲರೂ ಯೋಚಿಸೋದು ಗಣೇಶ್ ಮತ್ತು ರಶ್ಮಿಕಾ ಮತ್ತೊಂದು ಸಿನಿಮಾದಲ್ಲಿ ಒಟ್ಟಿಗೇ ನಟಿಸಲಿದ್ದಾರೆ ಅಂತ. ನಾವ್​ ಹೇಳ್ತಿರೋದು ಡೈರೆಕ್ಟರ್ ಸಿಂಪಲ್ ಸುನಿ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ ಬಗ್ಗೆ.
ಹೌದು, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚಮಕ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದವರು ಸುನಿ. 2017ರಲ್ಲಿ ರಿಲೀಸ್ ಆಗಿದ್ದ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಮತ್ತೆ ಸುನಿ-ಗಣಿ ಒಂದಾಗ್ತಿದ್ದಾರೆ. ಸದ್ಯ ಗಣೇಶ್ ಗಾಳಿಪಟ-2ನಲ್ಲಿ, ಸಿಂಪಲ್ ಸುನಿ ಶರಣ್ ಅಭಿನಯದ ಅವತಾರ ಪುರುಷ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈಗಾಗಲೇ ಆ ಗಣಿ-ಸುನಿ ಹೊಸ ಸಿನಿಮಾ ಬಗ್ಗೆ ಮಾತುಕತೆ ನಡೆಸಿದ್ದು, ಕೈಗೆತ್ತಿಕೊಂಡಿರುವ ಪ್ರಾಜೆಕ್ಟ್​ಗಳು ಕಂಪ್ಲೀಟ್ ಆದ್ಮೇಲೆ ಜೊತೆಯಾಗಿ ಹೊಸ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.

RELATED ARTICLES

Related Articles

TRENDING ARTICLES