ಬೆಂಗಳೂರು : ಪೋಷಕರು ಮೊಬೈಲ್ ಕಿತ್ತುಕೊಂಡಿದ್ದಕ್ಕೆ 10ನೇ ತರಗತಿ ವಿದ್ಯಾರ್ಥಿನಿ ನೇಣಿಗೆ ಶರಣಾದ ಘಟನೆ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜ್ಕುಮಾರ್ ರಸ್ತೆಯಲ್ಲಿರುವ ಠ್ಯಾಗೂರ್ ಶಾಲೆಯ ವಿದ್ಯಾರ್ಥಿನಿ ಬೆಸ್ಲಿ (16) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. 10ನೇ ತರಗತಿ ಎಕ್ಸಾಮ್ಗೆ ಓದೋದು ಬಿಟ್ಟು ಫ್ರೆಂಡ್ಸ್ ಕೊಡಿಸಿದ ಮೊಬೈಲ್ನಲ್ಲಿಯೇ ಕಾಲ ಕಳೀತಾ ಇದ್ದಿದ್ದರಿಂದ ಪೋಷಕರು ಮೊಬೈಲ್ ಕಿತ್ತುಕೊಂಡಿದ್ದರು. ಅಷ್ಟಕ್ಕೇ ಸಂಜೆ ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ. ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಬೈಲ್ ಕಿತ್ತುಕೊಂಡಿದ್ದಕ್ಕೆ ವಿದ್ಯಾರ್ಥಿನಿ ನೇಣಿಗೆ ಶರಣು..!
TRENDING ARTICLES


