ಅಭಿಷೇಕ್ ಹೊಸ ಲುಕ್​ಗೆ ನಿಖಿಲ್ ಮಾಡಿದ ಕಮೆಂಟ್ ಏನ್ ಗೊತ್ತಾ..?

ಅಮರ್ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿರುವ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಈಗ ಎರಡನೇ ಸಿನಿಮಾಕ್ಕೆ ರೆಡಿಯಾಗ್ತಿದ್ದು, ತಮ್ಮ ಹೊಸ ಲುಕ್​ನ ಖಡಕ್ ಫೋಟೋವೊಂದನ್ನು ಸೋಶಿಯಲ್ ಮೀಡುಯಾದಲ್ಲಿ ಹರಿಬಿಟ್ಟಿದ್ದಾರೆ.
ಹುರಿಗಟ್ಟಿದ ಮೀಸೆ, ಗಡ್ಡದಲ್ಲಿ ಅಭಿ ಕಾಣಿಸಿಕೊಂಡಿದ್ದಾರೆ. ತಮ್ಮ ಹೊಸ ಲುಕ್​ನ ಫೋಟೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಅಭಿಷೇಕ್ ಶೇರ್ ಮಾಡಿದ್ದು, ಅದಕ್ಕೆ ನಿಖಿಲ್ ಕುಮಾರಸ್ವಾಮಿ ಲುಕ್ಕಿಂಗ್ ಶಾರ್ಪ್​, ಮುಂದಿನ ಸಿನಿಮಾಕ್ಕೆ ಶುಭವಾಗ್ಲಿ ಅಂತ ಕಮೆಂಟ್​ ಮಾಡಿದ್ದಾರೆ. ನಿಖಿಲ್ ಕಮೆಂಟ್​ ಗೆ ಪ್ರತಿಕ್ರಿಯೆ ನೀಡಿರುವ ಅಭಿಷೇಕ್, ಧನ್ಯವಾದ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಕುರುಕ್ಷೇತ್ರದಲ್ಲಿ ಅಭಿಮನ್ಯು ಪಾತ್ರವನ್ನು ನೀವು ಉತ್ತಮವಾಗಿ ನಿರ್ವಹಿಸಿದ್ದೀರಿ. ನಿಮ್ಗೆ ಅಭಿನಂದನೆ ಅಂದಿರುವ ಅಭಿ, ಆದಷ್ಟು ಬೇಗ ಮುಂದಿನ ಚಿತ್ರ ಬರ್ಲಿ ಅಂತ ಶುಭ ಹಾರೈಸಿದ್ದಾರೆ.

RELATED ARTICLES

Related Articles

TRENDING ARTICLES