Saturday, September 13, 2025
HomeUncategorizedಉಪಸಮರಕ್ಕೆ ಭರ್ಜರಿ ಪ್ರಚಾರ - 17ರ ತನಕ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಸಿದ್ದರಾಮಯ್ಯ..!

ಉಪಸಮರಕ್ಕೆ ಭರ್ಜರಿ ಪ್ರಚಾರ – 17ರ ತನಕ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಸಿದ್ದರಾಮಯ್ಯ..!

ಹುಬ್ಬಳ್ಳಿ: ಕುಂದಗೋಳ ಉಪಸಮರದ ಅಖಾಡ ರಂಗೇರಿದ್ದು, ಇಂದು ಉಭಯ ನಾಯಕರಿಂದ ಭರ್ಜರಿ ಮತಬೇಟೆ ನಡೆಯಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದಿನಿಂದ ಫೀಲ್ಡಿಗಿಳಿಯಲಿದ್ದಾರೆ. 17 ನೇ ತಾರೀಕಿನವರೆಗೂ ಕುಂದಗೋಳದಲ್ಲೇ ವಾಸ್ತವ್ಯ ಹೂಡಲಿದ್ದು, ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ರೋಡ್‌ಶೋ ಮಾಡಲಿದ್ದಾರೆ. ಕಾಂಗ್ರೆಸ್​ ನಾಯಕರು ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಲಿದ್ದಾರೆ. ಬಿಜೆಪಿ ಪಾಳಯದಲ್ಲೂ ಚುನಾವಣಾ ಪ್ರಚಾರದ ಭರಾಟೆ ಗರಿಗೆದರಿದ್ದು, ಬಿ.ಶ್ರೀರಾಮುಲು ಹಾಗೂ ಅರವಿಂದ ಲಿಂಬಾವಳಿ ಕುಂದಗೋಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರ ಪರ ಪ್ರಚಾರ ನಡೆಸಿ ಮತಯಾಚನೆ ಮಾಡಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments