ನಾಳೆ 5ನೇ ಹಂತದ ಎಲೆಕ್ಷನ್ ; ಎಲ್ಲೆಲ್ಲಿ ನಡೆಯುತ್ತೆ ಮತ ಸಮರ?

ದೇಶದಾದ್ಯಂತ 7 ಹಂತಗಳಲ್ಲಿ ನಡೆಯುತ್ತಿರೋ ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನಕ್ಕೆ ನಾಳೆ ವೇದಿಕೆ ಸಜ್ಜಾಗಿದೆ. ಒಟ್ಟು 7 ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಘರ್ಷಣೆ, ಹಿಂಸಾಚಾರ, ನಕ್ಸಲರ ಉಪಟಳ ತಡೆಗೆ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.
ಶಾಂತಿಯುತ, ಮುಕ್ತ, ಪಾರದರ್ಶಕ ಮತ್ತು ನ್ಯಾಯಸಮ್ಮತ ಮತದಾನಕ್ಕಾಗಿ ಚುನಾವಣಾ ಆಯೋಗ ಅಂತಿಮ ಹಂತದ ಸಿದ್ಧತೆಗಳನ್ನು ಕೈಗೊಂಡಿದೆ. ಬಿಹಾರದ 5, ಜಮ್ಮು ಮತ್ತು ಕಾಶ್ಮೀರ-2, ಜಾರ್ಖಂಡ್-4, ಮಧ್ಯಪ್ರದೇಶ-7, ರಾಜಸ್ಥಾನ 12, ಉತ್ತರ ಪ್ರದೇಶ 1-14 ಮತ್ತು ಪಶ್ಚಿಮ ಬಂಗಾಳದ 7 ಸ್ಥಾನಗಳಿಗೆ ನಾಳೆ ಚುನಾವಣೆ ನಡೆಯಲಿದೆ.

RELATED ARTICLES

Related Articles

TRENDING ARTICLES