ಕರೋಲ್ ​ಬಾಗ್​ನಲ್ಲಿ ಬೆಂಕಿ ಅವಘಡ: 17 ಸಾವು

0
211

ದೆಹಲಿ: ಕರೋಲ್​ ಬಾಗ್​ನ ಅರ್ಪಿತ್​ ಪ್ಯಾಲೇಸ್​ ಹೊಟೇಲ್​ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 17 ಜನ ಮೃತಪಟ್ಟಿದ್ದಾರೆ. ಕರೋಲ್​ಬಾಗ್​ ದೆಹಲಿಯ ಹೆಚ್ಚು ಹೊಟೇಲ್​ಗಳಿರುವಂತಹ ಪ್ರದೇಶವಾಗಿದೆ. 

20ರಿಂದ 30 ಕೊಠಡಿಗಳಿಗೆ ಬೆಂಕಿ ಹರಡಿದ್ದು, ಮೂರು ಗಂಟೆಯಿಂದಲೂ ಬೆಂಕಿ ನಂದಿಸುವ ಕಾರ್ಯ ಪ್ರಗತಿಯಲ್ಲಿದೆ. ಆದರೂ ಈವರೆಗೆ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಸುಮಾರು 20 ಅಗ್ನಿಶಾಮಕ ದಳದ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.

 “ಬೆಳಗ್ಗೆ 4.30ರ ಹೊತ್ತಿಗೆ ಬೆಂಕಿ ಅವ ಘಡ ಸಂಭವಿಸಿರುವ ಕುರಿತು ಕರೆ ಬಂದಿತ್ತು. ನಾಲ್ಕನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರದಲ್ಲಿ ಎರಡನೇ ಹಂತಕ್ಕೂ ಹರಡಿದೆ. 7 ಗಂಟೆಯ ತನಕವೂ ಸುಮಾರು 40ರಷ್ಟು ಕೊಠಡಿಗಳಲ್ಲಿ ಬೆಂಕಿಯ ಜ್ವಾಲೆ, ಹೊಗೆ ತುಂಬಿಕೊಂಡಿತ್ತು” ಎಂದು ದೆಹಲಿ ಅಗ್ನಿ ಶಾಮಕ ಸೇವೆಗಳ ನಿರ್ದೇಶಕ ಜಿಸಿ ಮಿಶ್ರಾ ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಂಡಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

LEAVE A REPLY

Please enter your comment!
Please enter your name here