Thursday, October 6, 2022
Powertv Logo
Homeದೇಶ8 ಅದ್ಭುತಗಳಲ್ಲಿ 'ಏಕತಾ ಪ್ರತಿಮೆ'

8 ಅದ್ಭುತಗಳಲ್ಲಿ ‘ಏಕತಾ ಪ್ರತಿಮೆ’

ಅಹಮದಾಬಾದ್ : ಎಂಟು ರಾಷ್ಟ್ರಗಳ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ ( ಶಾಂಘೈ ಕೋ ಆಪರೇಷನ್​ ಆರ್ಗನೈಸೇಷನ್) (ಎಸ್​ ಸಿ ಒ) ವಿಶ್ವದ ಎಂಟು ಅದ್ಭುತಗಳಲ್ಲಿ ಗುಜರಾತ್​ನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ನೆಲೆಗೊಂಡಿರುವ ‘ಏಕತಾ ಪ್ರತಿಮೆ’ (ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆ) ಯನ್ನು ಸೇರಿಸಿದೆ. 

ಈ ಕುರಿತು, ‘ಎಸ್‌ಸಿಒದ ಎಂಟು ಅದ್ಭುತಗಳು’ ಯೋಜನೆಯಲ್ಲಿ ಏಕತೆಯ ಪ್ರತಿಮೆಯನ್ನು ಸೇರಿಸಲಾಗಿದೆ ಎಂದು ಹೇಳಲು ಸಂತೋಷವಾಗಿದೆ. ಈ ಗೌರವದಿಂದ ಖಂಡಿತ ಹೆಚ್ಚಿನ ಪ್ರವಾಸಿಗರು ಆಕರ್ಷಿತರಾಗುತ್ತಾರೆ’ ಎಂದು ವಿದೇಶಾಂಗ ಸಚಿವ ಎಸ್​.ಜಯಶಂಕರ್ ಟ್ವೀಟ್ ಮಾಡಿದ್ದಾರೆ.
ಭಾರತ, ಪಾಕಿಸ್ತಾನ, ಚೀನಾ, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ರಷ್ಯಾ ಮತ್ತು ಉಜ್ಬೇಕಿಸ್ತಾನ್ ಎಸ್ ಸಿ ಒದ ಎಂಟು ರಾಷ್ಟ್ರಗಳು.

LEAVE A REPLY

Please enter your comment!
Please enter your name here

- Advertisment -

Most Popular

Recent Comments