Home ದೇಶ-ವಿದೇಶ 74ನೇ ಸ್ವಾತಂತ್ರ್ಯ ದಿನಾಚರಣೆ : ಪ್ರಧಾನಿ ಮೋದಿ ಭಾಷಣದ ಹೈಲೆಟ್ಸ್

74ನೇ ಸ್ವಾತಂತ್ರ್ಯ ದಿನಾಚರಣೆ : ಪ್ರಧಾನಿ ಮೋದಿ ಭಾಷಣದ ಹೈಲೆಟ್ಸ್

ನವದೆಹಲಿ :  74ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ದೇಶದ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದರು.

74ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ  : ಸತತ 7ನೇ ಬಾರಿ  ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ಮೋದಿ ಭಾಷಣದ ಹೈಲೆಟ್ಸ್​

ಸ್ವಾತಂತ್ರ್ಯಕೋಸ್ಕರ ತ್ಯಾಗ ಮಾಡಿದವರನ್ನ ಸ್ಮರಿಸೋಣ
ಇಂದು ನಮ್ಮ ಸೈನಿಕರು ಗಡಿ ಕಾಯುತ್ತಿದ್ದಾರೆ
ವೀರ ಯೋಧರಿಗೆ ನಮನಗಳು. 
ದೇಶದ ಭವಿಷ್ಯಕ್ಕೆ ಕೊರೋನಾ ಅಡ್ಡಿಯಾಗಿದೆ
ಕೊರೋನಾ ವಾರಿಯರ್ಸ್​ಗೆ ನಮನ ಸಲ್ಲಿಸಿದ ಮೋದಿ
ಕೊರೋನಾ ಮೆಟ್ಟಿನಿಲ್ಲಲು ನಾವೆಲ್ಲರೂ ಹೋರಾಡೋಣ
ದೇಶಕ್ಕೆ ಸ್ವಾತಂತ್ರ್ಯ ಕೊಡಿಸಲು ಹಲವು ಮಹನೀಯರು ಪ್ರಾಣ ತೆತ್ತಿದ್ದಾರೆ
ಕೊರೋನಾ ಹೋರಾಟದಲ್ಲಿ ನಮ್ಮ ಗೆಲುವು ನಿಶ್ಚಿತ
ದೇಶದ ಹಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗಿದ್ದು ಸಂಕಷ್ಟ ತಂದಿದೆ
ಇದೆಲ್ಲದರ ಜೊತೆಗೆ ದೇಶದ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕು
ಈ ಸ್ವಾತಂತ್ರ್ಯೋತ್ಸವ ಹೊಸ ಉತ್ಸಾಹ ಹಾಗೂ ಪ್ರೇರಣೆ ಕೊಟ್ಟಿದೆ
ನಾವು ದೊಡ್ಡ ಸಂಕಲ್ಪದೊಂದಿಗೆ ಮುನ್ನಡೆಯಬೇಕಿದೆ
2021ಕ್ಕೆ 75ನೇ ಸ್ವಾತಂತ್ರ್ಯೋತ್ಸವಕ್ಕೆ ಕಾಲಿಡ್ತೀವಿ
75ನೇ ವರ್ಷ ಪೂರ್ಣಗೊಳ್ಳುವ ವೇಳೆ ನಮ್ಮ ಗುರಿ ಈಡೇರಿಸಿಕೊಳ್ಳಬೇಕಿದೆ
ಭಾರತದ ಆತ್ಮವನ್ನು ಕದಡುವ ಪ್ರಯತ್ನ ನಡೆಯಿತು, ಆದ್ರೆ ಆಂದೋಲನ ಬಿಡಲಿಲ್ಲ
ಸ್ವಾತಂತ್ರ್ಯ ಹೋರಾಟದಲ್ಲಿ ಭಾರತ ತನ್ನ ಏಕತೆ ಪ್ರದರ್ಶಿಸಿದೆ
ಸಾಮ್ರಾಜ್ಯ ಶಾಹಿಯನ್ನ ಭಾರತವು ಈಗಾಗಲೇ ಸೋಲಿಸಿದೆ, ಸಾಮ್ರಾಜ್ಯ ಶಾಹಿತ್ವ ಒಳ್ಳೆಯದಲ್ಲ
ವಿಶ್ವದಲ್ಲಿ ಸಾಮ್ರಾಜ್ಯ ಶಾಹಿ ಮಾಡಲು ಹೊರಟವರು ಯಾರು ಗೆದ್ದಿಲ್ಲ

 

ಆತ್ಮನಿರ್ಭರ ಭಾರತದ ಕನಸು ನನಸಾಗಿಸಲು ನಾವೆಲ್ಲಾ ಒಟ್ಟಾಗಿ ಶ್ರಮಿಸಬೇಕಿದೆ
ಭಾರತವನ್ನು ಸ್ವಾವಲಂಬಿ ದೇಶವನ್ನಾಗಿ ಮಾಡಲು ಎಲ್ಲರೂ ಒಟ್ಟಾಗಬೇಕಿದೆ
ಭಾರತ ಆತ್ಮನಿರ್ಭರ ಯೋಜನೆಯನ್ನ ಇಡೀ ವಿಶ್ವ ನೋಡುವಂತಾಗಿದೆ
ಆತ್ಮನಿರ್ಭರದಂತಹ ಯೋಜನೆಯನ್ನ ನಾವೆಲ್ಲರೂ ಯಶಸ್ವಿಗೊಳಿಸಬೇಕಿದೆ
ಆತ್ಮನಿರ್ಭರ ಯಶಸ್ವಿಯಾಗಬೇಕಿದ್ದರೆ ಆತ್ಮವಿಶ್ವಾಸದ ಭಾರತ ನಿರ್ಮಾಣವಾಗಬೇಕು
ಆತ್ಮನಿರ್ಭರದ ಮೂಲಕ ಸ್ವಾವಲಂಬನೆ ಸಾಧಿಸಲು ನಾವೆಲ್ಲಾ ಒಂದು ಹೆಜ್ಜೆ ಮುಂದಿಡೋ
ಕೊರೋನಾ ಸೋಂಕು ನಡುವೆ ಭಾರತ ಆತ್ಮನಿರ್ಭರದಂತಹ ಸಂಕಲ್ಪ ಮಾಡಿದೆ
ಭಾರತದ ಸ್ವಾವಲಂಬಿ ನಿರ್ಧಾರವನ್ನ ಎಲ್ಲಾ ದೇಶಗಳು ಕುತೂಹಲದಿಂದ ನೋಡುತ್ತಿವೆ
ನಮ್ಮ ರೈತರ ಶ್ರಮದಿಂದಾಗಿ ನಾವಿಂದು ಸ್ವಾವಲಂಬಿಗಳಾಗುತ್ತಿದ್ದೇವೆ
ಭಾರತ ಹಲವು ಸಂಪನ್ಮೂಲಗಳಿಂದ ಸಂಪದ್ಭರಿತವಾಗಿದೆ, ಆತ್ಮನಿರ್ಭರ ಯೋಜನೆ ಭಾರತದಲ್ಲಿ ಕಡ್ಡಾಯವಾಗಿದೆ
ಕೃಷಿ ಕ್ಷೇತ್ರದಲ್ಲಿ ಈಗಾಗಲೇ ಭಾರತ ಸ್ವಾವಲಂಬನೆ ಸಾಧಿಸಿದೆ, ಇತರೆ ಕ್ಷೇತ್ರಗಳಲ್ಲೂ ಸ್ವಾವಲಂಬಿಗಳಾಗಬೇಕಿದೆ

 

ಕೊರೋನಾ ವಿಷಯದಲ್ಲಿ ಇಡೀ ಜಗತ್ತು ಮೌನವಾಗಿದ್ದಾಗ ಭಾರತ ಎದ್ದುನಿಂತಿದೆ
ಯಾವುದೇ ಸಹಾಯವಿಲ್ಲದಿದ್ದರೂ ಸ್ವಾವಲಂಬಿಯಾಗುವುದನ್ನ ಕಲಿಸಿಕೊಟ್ಟಿದೆ
ಪಿಪಿಇ ಕಿಟ್​ಗಳ ಕೊರತೆ ಇದ್ದಾಗ ನಮ್ಮ ಯುವಕರು ಪಿಪಿಇ ಕಿಟ್​ಗಳನ್ನು ತಯಾರಿಸಿದರು
ಕೊರೋನಾ ಎದುರಿಸಲು ಬೇಕಾದ ಎಲ್ಲ ಸಲಕರಣೆಗಳನ್ನು ನಾವೇ ತಯಾರಿಸಿಕೊಂಡೆವು
ಇದೇ ಮಾದರಿಯಲ್ಲಿ ಆತ್ಮನಿರ್ಭರತೆಯನ್ನು ಸಾಧಿಸಲು ನಾವೆಲ್ಲ ಒಂದಾಗಬೇಕಿದೆ
ಕೊರೋನಾ ಕಾಲದಲ್ಲೇ ಭಾರತದಲ್ಲಿ ಹಲವು ಕಂಪನಿಗಳು ಸ್ಥಾಪಿತವಾಗಿವೆ
ಈ ಮೂಲಕ ಭಾರತ ಕೊರೋನಾ ಕಾಲದಲ್ಲೂ ಬಹಳಷ್ಟು ಸಾಧನೆ ಮಾಡಿದೆ
ಕೊರೋನಾ ಸಂಕಷ್ಟ ಕಾಲವೇ ಭಾರತಕ್ಕೆ ದೊಡ್ಡ ಅವಕಾಶ, ಶಕ್ತಿಯಾಗಿ ಮಾರ್ಪಟ್ಟಿದೆ

ನಮ್ಮ ದೇಶದಲ್ಲಿನ ಸುಧಾರಣೆಗಳು ಹಲವು ದೇಶಗಳಲ್ಲಿ ಭರವಸೆ ಮೂಡಿಸಿವೆ
ಭಾರತಕ್ಕೆ ಉತ್ಪಾದಿಸಿ ಎಂದರೆ ಜಗತ್ತಿಗೆ ಉತ್ಪಾದಿಸಿ ಮಾದರಿಯಾಗಿ ಎಂದು ಅರ್ಥ
ಭಾರತ ಕೈಗೊಂಡಿರುವ ಹಲವು ದಿಟ್ಟ ಕ್ರಮಗಳನ್ನು ಹಲವು ರಾಷ್ಟ್ರಗಳು ಸ್ವಾಗತಿಸಿವೆ
ಮೇಕ್ ಇನ್ ಇಂಡಿಯಾ ಅಲ್ಲ ಮೇಡ್ ಫಾರ್ ವರ್ಲ್ಡ್​​ ಎಂಬ ಘೋಷಣೆ ಮೊಳಗಬೇಕು
ಸ್ವಾವಲಂಬಿ ದೇಶ ಮಾತ್ರವಲ್ಲ ಇತರೆ ದೇಶಗಳಿಗೂ ನಾವು ಅಗತ್ಯವಾಗಬೇಕು
ರಾಷ್ಟ್ರೀಯ ಮೂಲ ಸೌಕರ್ಯ ಅಭಿವೃದ್ಧಿಗೆ 110 ಕೋಟಿ ರೂಪಾಯಿ ವೆಚ್ಚಮಾಡುತ್ತಿದ್ದೇವೆ
ನಮ್ಮ ಕಣ್ಣೆದುರೇ ನಮ್ಮ ಭಾರತ ಬದಲಾಗುತ್ತಿದೆ, ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ
ನಮ್ಮ ದೇಶದ ಅಭಿವೃದ್ಧಿ ಸಮಗ್ರವಾಗಿ ಇರಬೇಕು, ಎಲ್ಲರೂ ಒಟ್ಟಾಗಿ ಮುನ್ನಡೆಯಬೇಕು
ವಾಜಪೇಯಿ ಅವರ ಕಾಲದಲ್ಲಿ ಚತುಷ್ಫಥ ಯೋಜನೆ ಭಾರೀ ಯಶಸ್ವಿಯಾಗಿತ್ತು
ಇಂದು ಅದೇ ರಸ್ತೆಗಳಲ್ಲಿ ನಾವೆಲ್ಲ ಓಡಾಡುತ್ತಿದ್ದೇವೆ, ಇದು ನಮ್ಮೆಲ್ಲರ ಹೆಮ್ಮೆಯ ವಿಷಯ
ಕೇಂದ್ರ ಸರ್ಕಾರ ದೇಶದಲ್ಲಿ ಮೂಲ ಸೌಕರ್ಯ ಸೃಷ್ಟಿಗೆ ಅಗತ್ಯವಾದ ಎಲ್ಲ ನೆರವಿಗೂ ಸಿದ್ಧವಾಗಿದೆ

 

ಕರೋನಾದಿಂದ ಆಗಿರುವ ಆರ್ಥಿಕ ಹಿನ್ನೆಡೆಯಿಂದ ನಾವು ಹೊರಬರಲು ಮುಂದಾಗಬೇಕಿದೆ
ಆರ್ಥಿಕ ಪರಿಸ್ಥಿತಿಗೆ ಬೇಕಾದ ಎಲ್ಲ ಯೋಜನೆಗಳನ್ನು ರೂಪಿಸಲು ಕೇಂದ್ರ ಸರ್ಕಾರ ಬದ್ಧವಾಗಬೇಕಿದೆ
ಕೊರೋನಾ ಸಂಕಷ್ಟದಲ್ಲಿ ನಾವು ಹಲವು ಸಾಧನೆಗಳನ್ನು ಮಾಡಿದ್ದು ಇನ್ನಷ್ಟು ಮಾಡಬೇಕಿದೆ
ಕೇಂದ್ರ ಕಾರ್ಯಕ್ರಮಗಳ ಯಶಸ್ವಿಗೆ ಭಾರತದ ದೇಶದ ಜನ ನಮ್ಮ ಜೊತೆ ಕೈಕೋಡಿಸಬೇಕಿದೆ
ನಮ್ಮ ಎಲ್ಲ ಯೋಜನೆಗಳ ಬಡವರ ಕೇಂದ್ರಿಕೃವಾಗಿದ್ದು, ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದೇವೆ
ಕೌಶಲ್ಯಾಭಿವೃದ್ಧಿಯನ್ನು ಹೆಚ್ಚಿಸಿಕೊಂಡು ದೇಶದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕಿದೆ
ಅತಿ ಶೀಘ್ರದಲ್ಲಿ ನಮ್ಮ ದೇಶ ಕೊರೋನಾದಿಂದ ಮುಕ್ತಿ ಹೊಂದಲಿದೆ, ಮತ್ತಷ್ಟು ಪ್ರಕಾಶಿಸಲಿದೆ
ಕಾರ್ಮಿಕರಿಗೆ ಹಳ್ಳಿಯಲ್ಲೇ ಕೆಲಸ ಸಿಗುವಂತೆ ಗರೀಬ್ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸಲಾಗಿದೆ
ರೇಷನ್​ ಕಾರ್ಡ್​​​ ಇರಲಿ ಬಿಡಲು ಸುಮಾರು 80 ಕೋಟಿ ಜನರಿಗೆ ನಾವು ಪಡಿತರ ತಲುಪಿಸಿದ್ದೇವೆ
ದುಡಿಯಲು ಹಳ್ಳಿಗಳಿಂದ ನಗರಗಳಿಗೆ ಬರುವ ಜನರಿಗೆ ವಸತಿ ನೀಡುವ ಯೋಜನೆ ತಂದಿದ್ದೇವೆ
ನಾವು ಸ್ವಾಲಂಬಿಗಳಾಗಬೇಕಾದರೆ ಮೊದಲು ನಾವು ನಮ್ಮ ರೈತರ ಪರಿಸ್ಥಿತಿಯನ್ನು ಸುಧಾರಿಸಬೇಕಿದೆ
ಈ ಮೊದಲು ರೈತರಿಗೆ ಯಾವುದೇ ಆಯ್ಕೆಗಳು ಇರಲಿಲ್ಲ. ಆದರೆ ಈಗ ಅವರಿಗೂ ಮುಕ್ತ ಅವಕಾಶ ನೀಡಿದ್ದೇವೆ
ಈಗ ನಮ್ಮ ರೈತರು ತಾವು ಬೆಳೆದ ಉತ್ಪನ್ನಗಳು ತಮಗೆ ಇಷ್ಟಬಂದ ಕಡೆ ಮಾರಲು ಅವಕಾಶವಿದೆ

ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗಳು ಆರ್ಥಿಕ ಕ್ಲಸ್ಟರ್​ಗಳನ್ನು ಮಾಡಿದ್ದೇವೆ
ರೈತರಿಗೆ ಯಾವುದೇ ತೊಂದರೆಯಾಗದಂತೆ ಕೃಷಿ ಸಂಘಗಳನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ
ಕೊನೆಗೂ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶ ಈಡೇರಿದೆ
ಕೇಂದ್ರದ ಜಲ ಜೀವನ್​ ಯೋಜನೆ ಶುರುವಾಗಿ ಇಂದು ಒಂದು ವರ್ಷವಾಗಿದೆ
ಕೇಂದ್ರದ ಜಲ ಜೀವನ ಯೋಜನೆಯಿಂದ 2 ಕೋಟಿ ರೈತರಿಗೆ ಅನುಕೂಲವಾಗಿದೆ
ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗುವಂತೆ ಯೋಜನೆ ರೂಪಿಸಿದ್ದೇವೆ
ಮಧ್ಯಮ ವರ್ಗಗಳು ಮನೆ ಹೊಂದುವ ಕನಸನ್ನು ನಮ್ಮ ಸರ್ಕಾರ ಸಾಕಾರಗೊಳಿಸಿದೆ
ಮಾಧ್ಯಮ ವರ್ಗದ ಜನರ ಅಭಿವೃದ್ಧಿ ಕಡೆ ನಮ್ಮ ಸರ್ಕಾರ ಗಮನಹರಿಸಿದ್ದು ಹಲವು ಯೋಜನೆ ರೂಪಿಸಿದೆ
25 ಕೋಟಿ ಮಧ್ಯಮ ವರ್ಗದ ಕುಟುಂಬಗಳಿಗೆ ಕೇಂದ್ರ ಸರ್ಕಾರ ಮನೆಯನ್ನು ಒದಗಿಸಿದೆ
ಗೃಹ ಸಾಲದ ಬಡ್ಡಿ ದರ ಕಡಿಮೆಯಾಗಿದೆ, ಎಲ್ಲರಿಗೂ ಗೃಹ ಸಾಲ ಕೊಡುವಂತೆ ಮಾಡಲಾಗಿದೆ
ಕೃಷಿ ಮತ್ತು ಮೂಲ ಸೌಕರ್ಯ ವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಿದೆ

ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಇಡೀ ದೇಶವನ್ನು ಸ್ವಾವಲಂಬಿ ದೇಶವನ್ನಾಗಿ ಮಾಡುತ್ತೇವೆ
ನಮ್ಮ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಯುವಕರನ್ನು ಜಗತ್ತಿನ ನಾಗರಿಕರನ್ನು ಪರಿವರ್ತಿಸಲಿದೆ
ನಮ್ಮ ಹೊಸ ಶಿಕ್ಷಣ ನೀತಿ ಎಲ್ಲರಲ್ಲೂ ಹೊಸ ಭರವಸೆ, ನಂಬಿಕೆಯನ್ನು ಮೂಡಿಸಿದೆ
ಭಾರತದಲ್ಲಿ 3 ದಶಕಗಳ ಬಳಿಕ ಹೊಸ ಶಿಕ್ಷಣ ನೀತಿ ಜಾರಿಯಾಗುತ್ತಿದ್ದು ಭಾರೀ ಸಂಚಲನ ಮೂಡಿಸಿದೆ

ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಇಡೀ ದೇಶವನ್ನು ಸ್ವಾವಲಂಬಿ ದೇಶವನ್ನಾಗಿ ಮಾಡುತ್ತೇವೆ
ನಮ್ಮ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಯುವಕರನ್ನು ಜಗತ್ತಿನ ನಾಗರಿಕರನ್ನು ಪರಿವರ್ತಿಸಲಿದೆ
ನಮ್ಮ ಹೊಸ ಶಿಕ್ಷಣ ನೀತಿ ಎಲ್ಲರಲ್ಲೂ ಹೊಸ ಭರವಸೆ, ನಂಬಿಕೆಯನ್ನು ಮೂಡಿಸಿದೆ
ಭಾರತದಲ್ಲಿ 3 ದಶಕಗಳ ಬಳಿಕ ಹೊಸ ಶಿಕ್ಷಣ ನೀತಿ ಜಾರಿಯಾಗುತ್ತಿದ್ದು ಭಾರೀ ಸಂಚಲನ ಮೂಡಿಸಿದೆ

ಭಾರತದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್ ಭಾರತಕ್ಕೆ ಭಾರಿ ಸಮಸ್ಯೆ ಇದೆ ಎಂಬುದು ಗೊತ್ತಿದೆ
ಆಪ್ಟಿಕಲ್​ ಫೈಬರ್​ ಮುಂದಿನ 1000 ದಿನಗಳಲ್ಲಿ 6 ಲಕ್ಷ ಗ್ರಾಮಗಳಲ್ಲಿ ಲಭ್ಯವಾಗಲಿದೆ
ಕೆಲವೇ ದಿನಗಳಲ್ಲಿ ಹೊಸ ಪೈಬರ್​ ನೀತಿ ಜಾರಿಯಾಗಲಿದ್ದು ಡಿಜಿಟಲ್​ ಕ್ಷೇತ್ರದಲ್ಲಿ ಸಾಧನೆ ಮಾಡಲಿದ್ದೇವೆ
ಹೊಸ ಸವಾಲುಗಳನ್ನು ಎದರಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ
ಗ್ರಾಮೀಣ ಭಾಗದ ಮಹಿಳೆಯರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ
ಸೇನೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ ಕಲ್ಪಿಸಲು ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧಿರಿಸಿದೆ
ಮಹಿಳೆಯರ ಮದುವೆಯ ವಯಸ್ಸು ಹೆಚ್ಚಿಸುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ
ಮಹಿಳೆಯರು ಇನ್ನಷ್ಟು ಕ್ಷೇತ್ರದಲ್ಲಿ ಭಾಗವಹಿಸಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕಿದೆ
ಗ್ರಾಮೀಣ ಪ್ರದೇಶದಲ್ಲಿ 1.5 ಲಕ್ಷ ಆರೋಗ್ಯ ಕೇಂದ್ರಗಳನ್ನು ನಾವು ಸ್ಥಾಪಿಸಿದ್ದೇವೆ
ಇಂದಿನಿಂದ ನಾವು ಹೊಸ ಡಿಜಿಟಲ್​ ಆರೋಗ್ಯ ಯೋಜನೆ ಶುರುಮಾಡುತ್ತಿದ್ದೇವೆ
ದೇಶದ ಪ್ರತಿಯೊಬ್ಬ ಪ್ರಜೆಯೂ ಆರೋಗ್ಯ ಗುರುತಿನ ಕಾರ್ಡ್​​ನ್ನು ಹೊಂದಲಿದ್ದಾರೆ

 

ಕೇಂದ್ರ ಸರ್ಕಾರದ ದೇಶದ ಪ್ರತಿಯೊಬ್ಬ ಪ್ರಜೆಗೂ ವ್ಯಾಕ್ಸಿನ್​ ಸಿಗುವಂತೆ ಮಾಡುತ್ತೇವೆ
ದೇಶದಲ್ಲಿ ಮೂರು ವ್ಯಾಕ್ಸಿನ್​ಗಳು ಪ್ರಾಯೋಗಿಕ ಹಂತದಲ್ಲಿವೆ, ಎಲ್ಲ ಪ್ರಗತಿಯಲ್ಲಿವೆ
ಪ್ರತಿಯೊಬ್ಬ ಪ್ರಜೆಗೂ ವ್ಯಾಕ್ಸಿನ್​ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಮುಂದಾಗಲಿದೆ
ಕೊರೋನಾ ಸಂಕಷ್ಟದಿಂದ ಪಾರಾಗಲು ಕೇಂದ್ರ ಸರ್ಕಾರ ಎಲ್ಲರಿಗೂ ಲಸಿಕೆ ಒದಗಿಸಲಿದೆ
ಭಾರತದ ಸಂಶೋಧಕರು ಮುಂಚೂಣಿಯಲ್ಲಿದ್ದಾರೆ, ಲಸಿಕೆ ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯಾಗಲಿದೆ
ಶೀಘ್ರವೇ ಕೊರೋನಾ ಲಸಿಕೆಗೆ ಹಸಿರು ನಿಶಾನೆ ಸಿಗಲಿದೆ, ಎಲ್ಲರಿಗೂ ಲಸಿಗೆ ಲಭ್ಯವಾಗಲಿದೆ

 

ಜಮ್ಮು ಕಾಶ್ಮೀರದಲ್ಲಿ ಶೀಘ್ರದಲ್ಲೇ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಸಜ್ಜಾಗಿದೆ
ಲಡಾಖ್ ಜನರ ಆಶೋತ್ತರಗಳನ್ನು ಕೇಂದ್ರ ಸರ್ಕಾರ ನೆರವೇರಿಸಲು ಸಿದ್ಧವಾಗಿದೆ
ಲಡಾಖ್​​ನಲ್ಲಿ ಬೃಹತ್ ಪ್ರಮಾಣದ ಅಭಿವೃದ್ಧಿ ಕಾರ್ಯಗಳನ್ನು ಕೇಂದ್ರ ಕೈಗೊಳ್ಳಲಿದೆ
ಜಮ್ಮು-ಕಾಶ್ಮೀರದ ಯುವಕರು ಸ್ವಾವಲಂಬಿಲಾಗಿ ಮುನ್ನಡೆ ಸಾಧಿಸಿದ್ದಾರೆ

ಭಾರತದ ವಿರುದ್ಧ ಷಡ್ಯಂತ್ರ ನಡೆಸಿದವರಿಗೆ ನಾವು ತಕ್ಕ ಪ್ರತ್ಯುತ್ತರ ಕೊಟ್ಟಿದ್ದೇವೆ
ನಮ್ಮ ಯೋಧರು ವಿರೋಧಿ ದೇಶಗಳಿಗೆ ಸರಿಯಾದ ತಿರುಗೇಟನ್ನು ಕೊಟ್ಟಿದ್ದಾರೆ

ಎಲ್​ಓಸಿ ಮತ್ತು ಎಲ್​ಎಸಿ ಎಲ್ಲ ಕಡೆಯೂ ನಾವು ಸಮರ್ಥವಾಗಿ ಎದುರಿಸುತ್ತಿದ್ದೇವೆ
ಭಾರತದ ಗಡಿಯಲ್ಲಿ ನಮ್ಮ ತಾಕತ್ತು ಪ್ರಶ್ನಿಸಲು ಬಂದವರಿಗೆ ತಕ್ಕ ಉತ್ತರ ಸಿಕ್ಕಿದೆ
ವಿಶ್ವ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ 184 ರಾಷ್ಟ್ರಗಳ ಬೆಂಬಲ ಸಿಕ್ಕಿದೆ
ನಮ್ಮನೆರೆಹೊರೆಯವರ ಮೇಲೆ ನಾವು ನಂಬಿಕೆಯಿಟ್ಟು ಮುನ್ನಡೆಯುತ್ತಿದ್ದೆವೆ
ಇಡೀ ಜಗತ್ತು ಲಡಾಖ್​ನಲ್ಲಿ ನಾವು ತೋರಿಸಿದ ಶೌರ್ಯವನ್ನು ನೋಡಿದೆ
ನೆರೆ ಹೊರೆಯ ದೇಶಗಳೊಂದಿಗೆ ಸಂಬಂಧ ವೃದ್ಧಿಗೆ ಭಾರತ ಸದಾ ಸಿದ್ಧವಾಗಿದೆ

 

ಭಾರತದ ವಿರುದ್ಧ ಷಡ್ಯಂತ್ರ ನಡೆಸಿದವರಿಗೆ ನಾವು ತಕ್ಕ ಪ್ರತ್ಯುತ್ತರ ಕೊಟ್ಟಿದ್ದೇವೆ
ನಮ್ಮ ಯೋಧರು ವಿರೋಧಿ ದೇಶಗಳಿಗೆ ಸರಿಯಾದ ತಿರುಗೇಟನ್ನು ಕೊಟ್ಟಿದ್ದಾರೆ
ಎಲ್​ಓಸಿ ಮತ್ತು ಎಲ್​ಎಸಿ ಎಲ್ಲ ಕಡೆಯೂ ನಾವು ಸಮರ್ಥವಾಗಿ ಎದುರಿಸುತ್ತಿದ್ದೇವೆ
ಭಾರತದ ಗಡಿಯಲ್ಲಿ ನಮ್ಮ ತಾಕತ್ತು ಪ್ರಶ್ನಿಸಲು ಬಂದವರಿಗೆ ತಕ್ಕ ಉತ್ತರ ಸಿಕ್ಕಿದೆ
ವಿಶ್ವ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ 184 ರಾಷ್ಟ್ರಗಳ ಬೆಂಬಲ ಸಿಕ್ಕಿದೆ
ನಮ್ಮನೆರೆಹೊರೆಯವರ ಮೇಲೆ ನಾವು ನಂಬಿಕೆಯಿಟ್ಟು ಮುನ್ನಡೆಯುತ್ತಿದ್ದೆವೆ
ಇಡೀ ಜಗತ್ತು ಲಡಾಖ್​ನಲ್ಲಿ ನಾವು ತೋರಿಸಿದ ಶೌರ್ಯವನ್ನು ನೋಡಿದೆ
ನೆರೆ ಹೊರೆಯ ದೇಶಗಳೊಂದಿಗೆ ಸಂಬಂಧ ವೃದ್ಧಿಗೆ ಭಾರತ ಸದಾ ಸಿದ್ಧವಾಗಿದೆ

 

 

 

 

 

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments