ವೈದ್ಯರು ಸತ್ತಿದ್ದಾನೆ ಅಂದಿದ್ರು ; ಆತ ಮರುದಿನ ಶವಗಾರದಲ್ಲಿ ಉಸಿರಾಡುತ್ತಿದ್ದ..!

0
892

ವೈದ್ಯರು ಆತ ಸತ್ತಿದ್ದಾನೆ ಅಂತ ಡಿಕ್ಲೇರ್ ಮಾಡಿದ್ರು. ಆತನ ದೇಹವನ್ನು ಶವಗಾರಕ್ಕೂ ರವಾನಿಸಲಾಗಿತ್ತು. ಹೆಚ್ಚು ಕಮ್ಮಿಯಾಗಿದ್ರೆ ಮರುದಿನ ಆತನನ್ನು ಜೀವಂತವಾಗಿ ಸುಟ್ಟು ಬಿಡ್ತಿದ್ರು..! ಆದರೆ, ಕೊನೇ ಕ್ಷಣದಲ್ಲಿ ಆತ ಇನ್ನೂ ಉಸಿರಾಡುತ್ತಿದ್ದಾನೆ ಅಂತ ಗೊತ್ತಾಯ್ತು.
ಈ ಘಟನೆ ನಡೆದಿರುವುದು ಮಧ್ಯಪ್ರದೇಶದಲ್ಲಿ. ಚತರ್ಪುರ ಜಿಲ್ಲೆಯ ನೌಗಾಂವ್​ನ 72 ವರ್ಷದ ಕಿಷನ್ ಎಂಬುವವರು ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಅದನ್ನು ಗಮನಿಸಿದವರು ಅವರನ್ನು ಬಿನಾ ನಗರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಚಿಕಿತ್ಸೆ ನೀಡಿದ ವೈದ್ಯರು ಕಿಷನ್ ಸತ್ತಿದ್ದಾರೆ ಅಂತ ಘೋಷಿಸಿದ್ರು. ಮುಂದಿನ ಕಾರ್ಯಕ್ಕಾಗಿ ಅವರ ದೇಹವನ್ನು ಶವಗಾರಕ್ಕೆ ಕಳುಹಿಸಲಾಗಿತ್ತು. ಮರುದಿನ ಪೊಲೀಸರ ಸಮ್ಮುಖದಲ್ಲಿ ಅವರ ದೇಹವನ್ನು ತೆಗೆಯುವಾಗ ಕಿಷನ್ ಉಸಿರಾಡುತ್ತಿದ್ದರು. ಅಂದ್ರೆ, ಅವರು ಸತ್ತಿರಲಿಲ್ಲ..! ಕೂಡಲೇ ತುರ್ತು ಚಿಕಿತ್ಸೆ ನೀಡಲಾಯಿತು. ಆದರೆ, ಸಂಜೆ ವೇಳೆ ಅವರು ಮೃತಪಟ್ಟಿದ್ದಾರೆ.

LEAVE A REPLY

Please enter your comment!
Please enter your name here