ನೈಜೀರಿಯಾ: ಮಾಲಿ ದೇಶದ ಗಡಿಭಾಗದಲ್ಲಿರುವ ನೈಜೀರಿಯಾದ ಸೇನಾ ಶಿಬಿರದ ಮೇಲೆ ಭಯೋತ್ಪಾದಕರು ದಾಳಿ ಮಾಡಿ 71 ಸೈನಿಕರನ್ನು ಹತ್ಯೆ ಮಾಡಿದ್ದಾರೆ .
ಸೇನಾ ಶಿಬಿರದ ಮೇಲೆ ಶೆಲ್, ಮೋರ್ಟಾರ್ ಮತ್ತು ಅತ್ಯಾಧುನಿಕ ರೈಫಲ್ಗಳಿಂದ ದಾಳಿ ಮಾಡಿ ಯೋಧರನ್ನು ಕೊಂದಿದ್ದಾರೆ ಎಂದು ನೈಜೀರಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ . ಸುಮಾರು ವರ್ಷಗಳ ಹಿಂದಿನಿಂದಲೂ ನೈಜೀರಿಯಾ, ಇಸ್ಲಾಮಿಕ್ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಎದುರಿಸುತ್ತಿದೆ . ನೈಜೀರಿಯಾದ ಪಶ್ಚಿಮ ತಿಲ್ಲಬೆರಿ ಶಿಬಿರದ ಮೇಲೆ ಮಂಗಳವಾರ ಅತಂತ್ಯ ಕ್ರೂರವಾಗಿ ದಾಳಿ ನಡೆದಿದೆ. ಭಯೋತ್ಪಾದಕರ ಆಕ್ರಮಣಗಳಿಗೆ ತುತ್ತಾಗುತ್ತಿರುವ ನೈಜೀರಿಯಾ ಉಗ್ರರ ವಿರುದ್ಧ ಹೋರಾಟಕ್ಕೆ ಆದ್ಯತೆ ನೀಡಿತ್ತು. ಈಗ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿರುವುದು ಈ ಹೋರಾಟಕ್ಕೆ ತೀವ್ರ ಹಿನ್ನಡೆಯುಂಟು ಮಾಡಿದೆ. ಭಯೋತ್ಪಾದಕರ ದಾಳಿಯಲ್ಲಿ 71 ಸೇನಾ ಸಿಬ್ಬಂದಿ ಹತರಾಗಿದ್ದು, 12 ಮಂದಿ ಗಾಯಗೊಂಡಿದ್ದಾರೆ . ಕೆಲವು ಮಂದಿ ನಾಪತ್ತೆಯಾಗಿದ್ದಾರೆಂದು ರಕ್ಷಣಾ ಸಚಿವಾಲಯ ತಿಳಿಸಿದೆ.