ಪಾರ್ಕ್​ನಲ್ಲಿ ಆಡುತ್ತಿದ್ದ ಬಾಲಕ ಸಾವು

0
276

ಬೆಂಗಳೂರು : ಆಟ ಆಡುತ್ತಿದ್ದ ಬಾಲಕ ವಿದ್ಯುತ್ ತಗುಲಿ ಸಾವನ್ನಪ್ಪಿರುವ ದುರ್ಘಟನೆ ಬಾಣಸವಾಡಿಯ ರಾಜ್​ಕುಮಾರ್ ಪಾರ್ಕ್​ನಲ್ಲಿ ನಡೆದಿದೆ.
7 ವರ್ಷದ ಕಂದಮ್ಮ ಉದಯ್​ಕುಮಾರ್​ ಮೃತ ದುರ್ದೈವಿ. ಈತ ಪಾರ್ಕ್​ನಲ್ಲಿ ಆಟ ಆಡುತ್ತಿರುವಾಗ ಆಕಸ್ಮಿಕವಾಗಿ ವಿದ್ಯುತ್ ವೈರ್ ತುಳಿದು ಮೃತಪಟ್ಟಿದ್ದಾನೆ. ಘಟನೆಯಲ್ಲಿ ಬಿಬಿಎಂಪಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ತಂತಿ ಕೆಳಗೆ ಬಿದ್ದಿದ್ದರೂ ಅತ್ತ ಗಮನಕೊಡದೇ ನಿರ್ಲಕ್ಷ್ಯ ತಾಳಿದ್ದರಿಂದಲೇ ಪುಟ್ಟ ಕಂದಮ್ಮ ಅಸುನೀಗಿರೋದು. ಎಂಥವರ ಕರುಳು ಹಿಂಡುವಂತಿದೆ ಪುಟ್ಟ ಬಾಲಕನ ಸಾವು. ಈತನ ದುರಂತ ಅಂತ್ಯ ಮಮ್ಮಲ ಮರಗುವಂತಿದ್ದು, ಬಾಲಕ ಉದಯ್​ಕುಮಾರ್ ಅವರ ತಂದೆ ಈ ಬಗ್ಗೆ ಕಂಪ್ಲೇಂಟ್ ನೀಡಿದ್ದು, ಬಾಣಸವಾಡಿ ಪೊಲೀಸ್​ ಸ್ಟೇಷನ್​ನಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here