Sunday, June 26, 2022
Powertv Logo
Homeರಾಜ್ಯಹೊರ ದೇಶ, ಹೊರ ರಾಜ್ಯದಿಂದ ಬಂದವರೇ ಕರ್ನಾಟಕಕ್ಕೆ ಕಂಟಕ : ಇಂದು ಮತ್ತೆ 69 ಜನರಲ್ಲಿ...

ಹೊರ ದೇಶ, ಹೊರ ರಾಜ್ಯದಿಂದ ಬಂದವರೇ ಕರ್ನಾಟಕಕ್ಕೆ ಕಂಟಕ : ಇಂದು ಮತ್ತೆ 69 ಜನರಲ್ಲಿ ಕೊರೋನಾ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕ ಏರಿಕೆಯಗುತ್ತಲೇ ಇದೆ. ಇಂದಿನ ಮಧ್ಯಾಹ್ನದ ಹೆಲ್ತ್​ ಬುಲೆಟಿನ್ ಪ್ರಕಾರ ಕರ್ನಾಟಕದಲ್ಲಿ ಇಂದು 69 ಕೊರೋನಾ ಪ್ರಕರಣಗಳು ಪತ್ತೆಯಾಗಿದೆ ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2,158 ಕ್ಕೆ ಏರಿದೆ.

ಕರ್ನಾಟಕದಲ್ಲಿ ಪತ್ತೆಯಾದ ಕೇಸ್​ಗಳಲ್ಲಿ ಅರ್ಧದಷ್ಟು ಜನ ನೆರೆರಾಜ್ಯ ಮಹಾರಾಷ್ಟ್ರದಿಂದ ಬಂದವರೇ ಆಗಿದ್ದಾರೆ. ಇಂದು ಪತ್ತೆಯಾದ 69 ಕೊರೋನಾ ಪ್ರಕರಣಗಳಲ್ಲಿ  55 ಮಂದಿ ಸೋಂಕಿತರು ಮಹಾರಾಷ್ಟ್ರದಿಂದ ಬಂದಿದ್ದಾರೆ. ಅದರಲ್ಲಿ ಉಡುಪಿಯಲ್ಲಿ 14, ಮಂಡ್ಯದಲ್ಲಿ ಒಬ್ಬರು, ದಕ್ಷಿಣ ಕನ್ನಡದಲ್ಲಿ ಮೂವರು, ಯಾದಗಿರಿಯಲ್ಲಿ 15 ಜನರಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರು 1,  ವಿಜಯಪುರ 1, ಕಲಬುರಗಿಯಲ್ಲಿ 14, ಬಳ್ಳಾರಿಯಲ್ಲಿ ಒಬ್ಬರಿಗೆ  ಮಹಾರಾಷ್ಟ್ರ ಕ್ಕೆ ಪ್ರಯಾಣ ಬೆಳೆಸಿದ್ದರಿಂದ ಸೋಂಕು ಹರಡಿದೆ.

ಉಡುಪಿಯಲ್ಲಿ ಇಬ್ಬರಲ್ಲಿ ದುಬೈಗೆ ಪ್ರಯಾಣ ಬೆಳೆಸಿದ್ದರಿಂದ ಸೋಂಕು ಹರಡಿದೆ. ಬೆಂಗಳೂರಲ್ಲಿ ಪೇಷೆಂಟ್ 1930 ರ ಸಂಪರ್ಕದಿಂದ ಮೂವರಿಗೆ ಸೋಂಕು ಹರಡಿದೆ. ಇನ್ನುಳಿದಂತೆ ಕಂಟೈನ್ಮೆಂಟ್ ಝೋನ್​ಗೆ ತೆರಳಿದ್ದರಿಂದ ಒಬ್ಬರಿಗೆ, ಹಾಗೂ ಯುಕೆ ಗೆ ಪ್ರಯಾಣ ಬೆಳೆಸಿದ್ದರಿಮದ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಬೀದರ್​ನಲ್ಲಿ ಮಸ್ಕತ್​ಗೆ ಪ್ರಯಾಣ ಬೆಳೆಸಿದವರು ಒಬ್ಬರಿಗೆ ಸೋಂಕು ತಗುಲಿದೆ. ಕೋಲಾರದಲ್ಲಿ  ಒಂದು ತಮಿಳುನಾಡಿಗೆ ಪ್ರಯಾಣ ಹಾಗೂ ಪೇಷೆಂಟ್ 1963 ರ ಸಂಪರ್ಕದಿಂದ ಸೊಂಕು ತಗುಲಿದೆ. ಇಂದು ತುಮಕೂರಿನಲ್ಲಿ ಒಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿನ ಮೂಲ ಪತ್ತೆಯಾಗಿಲ್ಲ. ಮಂಡ್ಯದಲ್ಲಿ ಪೇಷೆಂಟ್ 869 ರ ಸೋಂಕಿತನ ಸಂಪರ್ಕದಿಂದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಬಳ್ಳಾರಿಯಲ್ಲಿ ಒಬ್ಬರು ಉತ್ತರ ಪ್ರದೇಶ ಪ್ರಯಾಣ ಹಾಗೂ ಇನ್ನೊಬ್ಬ ಸೋಂಕಿತ  ನವದೆಹಲಿ ಪ್ರಯಾಣ ಬೆಳೆಸಿದ್ದರಿಂದ ಸೋಂಕು ಹರಡಿದೆ. ಇನ್ನುಳಿದಂತೆ ಧಾರವಾಡದಲ್ಲಿ ಪೇಷೆಂಟ್ 1942, 1943,1944,1945 ಸೋಂಕಿತರ ಸಂಪರ್ಕದಿಂದ ಮೂವರಿಗೆ ಸೋಂಕು ಬಂದಿದೆ. 

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments