ರಾಜ್ಯದಲ್ಲಿ ಇಂದು ಮತ್ತೆ 63 ಜನರಲ್ಲಿ ಸೋಂಕು ದೃಢ : ಸೋಂಕಿತರ ಸಂಖ್ಯೆ 1,458 ಕ್ಕೆ ಏರಿಕೆ

0
679

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್-19ಗೆ ತುತ್ತಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇತ್ತೀಚೆಗೆ ಪತ್ತೆಯಾಗುತ್ತಿರುವ ಕೊರೋನಾ ಪ್ರಕರಣಗಳಲ್ಲಿ ಹೆಚ್ಚಿನ ಸೋಂಕಿತರು ಹೊರ ರಾಜ್ಯದಿಂದ ಬಂದವರೇ ಆಗಿದ್ದಾರೆ. ಇಂದು ಮತ್ತೆ 63 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 1,458 ಜನ ಸೋಂಕಿಗೆ ತುತ್ತಾಗಿದ್ದಾರೆ.

ಇಂದು ರಾಜ್ಯದಲ್ಲಿ ಪತ್ತೆಯಾದ ಸೋಂಕಿತರಲ್ಲಿ ಮಂಡ್ಯದಲ್ಲಿ 8 ಜನ, ಬೆಂಗಳೂರು ನಗರ 4, ಕಲಬುರಗಿ 7, ಬೀದರ್ 10, ಹಾಸನ 21, ಉಡುಪಿ 6, ತುಮಕೂರು 4 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಇನ್ನುಳಿದಂತೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಯಾದಗಿರಿಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಇನ್ನು ಈವರೆಗೆ ರಾಜ್ಯದಲ್ಲಿ 40 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 1,458 ಜನ ಸೋಂಕಿತರಲ್ಲಿ ಒಟ್ಟು 553 ಜನ ಸೋಂಕಿತರು ಗುಣಮುಖರಾಗಿದ್ದು, ಇಂದು ಒಂದೇ ದಿನ 10 ಜನ ಸೋಂಕಿತರು ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಬೆಂಗಳೂರು ನಗರ 1, ದಾವಣಗೆರೆ 7 ಹಾಗೂ ಧಾರವಾಡದಲ್ಲಿ ಇಬ್ಬರು ಸೋಂಕಿತರು ಗುಣಮುಖರಾಗಿದ್ದಾರೆ. ಈ  ಮೂಲಕ ಒಟ್ಟು 864 ಜನ ಸೋಂಕಿತರು ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ. 

LEAVE A REPLY

Please enter your comment!
Please enter your name here