Tuesday, September 27, 2022
Powertv Logo
Homeದೇಶದೇಶಾದ್ಯಂತ  62 ಸಾವಿರ ಗಡಿ ದಾಟಿದೆ ಸೋಂಕಿತರ ಸಂಖ್ಯೆ : ಸಾವಿನ ಸಂಖ್ಯೆ 2,109 ಕ್ಕೆ...

ದೇಶಾದ್ಯಂತ  62 ಸಾವಿರ ಗಡಿ ದಾಟಿದೆ ಸೋಂಕಿತರ ಸಂಖ್ಯೆ : ಸಾವಿನ ಸಂಖ್ಯೆ 2,109 ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಪ್ರತಿದಿನ ಸೋಂಕಿತರ ಸಂಖ್ಯೆ 3 ಸಾವಿರದಷ್ಟು ಏರಿಕೆಯಾಗುತ್ತಿದೆ. ಕಳೆದ 24 ಗಂಟೆಯಲ್ಲೂ 3,277 ಜನರಲ್ಲಿ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 62,939 ಕ್ಕೇರಿಕೆಯಾಗಿದೆ. ಇನ್ನು 128 ಮಂದಿ ಸಾವನ್ನಪ್ಪಿದ್ದು, ಈವರಗೆ 2,109 ಜನ ಮೃತಪಟ್ಟಿದ್ದಾರೆ. ಇವೆಲ್ಲದರ ನಡುವೆ 19,358 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 20 ಸಾವಿರದ ಗಡಿ ದಾಟಿದ್ದು, ಕಳೆದ 24 ಗಂಟೆಯಲ್ಲಿ 1,165 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸಾವನ್ನಪ್ಪಿದವರ ಸಂಖ್ಯೆ 48 ರಷ್ಟು ಏರಿಕೆಯಾಗಿದ್ದು, 779 ಕ್ಕೆ ಏರಿಕೆಯಾಗಿದೆ.ಈ ಮಧ್ಯೆ 3,800 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಗುಜರಾತ್​ನಲ್ಲಿ ಸೋಂಕಿತರ ಸಂಖ್ಯೆ 7,796ಕ್ಕೆ ಏರಿಕೆಯಾಗಿದೆ. ಸಾವನ್ನಪ್ಪಿದವರ ಸಂಖ್ಯೆ 472 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, 6,542 ಜನರಲ್ಲಿ ಸೋಂಕು ಪತ್ತೆಯಾಗಿದೆ.  ಇನ್ನು ಕೇವಲ 24 ಗಂಟೆಯಲ್ಲಿ 5 ಜನ ಸಾವನ್ನಪ್ಪಿದ್ದು, ಈವರಗೆ 73 ಮಂದಿ ಸೋಂಕಿತರ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲೂ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, 6,500 ರ ಗಡಿ ದಾಟಿದೆ. 

6 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments