Thursday, September 29, 2022
Powertv Logo
Homeತಂತ್ರಜ್ಞಾನಆಗಸ್ಟ್​ನಿಂದ ಭಾರತದಲ್ಲಿ ಏರ್​ಟೆಲ್ 5G ಸೇವೆ

ಆಗಸ್ಟ್​ನಿಂದ ಭಾರತದಲ್ಲಿ ಏರ್​ಟೆಲ್ 5G ಸೇವೆ

5G ಸೇವೆಗಳನ್ನು ಪಡೆಯಬೇಕು ಎನ್ನುವ ಭಾರತೀಯರ ಸುದೀರ್ಘ ಕನಸು ಈಡೇರುವ ಕ್ಷಣಗಳು ಹತ್ತಿರವಾಗುತ್ತಿವೆ. ಈ ಸಂಬಂಧ ಭಾರ್ತಿ ಏರ್​ಟೆಲ್ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ.

ತನ್ನ ಮೊದಲ 5G ಗುತ್ತಿಗೆಯನ್ನು ಎರಿಕ್​ಸನ್ ಕಂಪನಿಗೆ ನೀಡಿದ್ದು, ಇದೇ ತಿಂಗಳಲ್ಲಿ ಸೇವೆಗಳನ್ನು ಒದಗಿಸಲಾಗುವುದು ಎಂದು ಹೇಳಿದೆ. ಏರ್​ಟೆಲ್​ನೊಂದಿಗೆ 25 ವರ್ಷಗಳಿಗೂ ಹೆಚ್ಚು ಕಾಲದ ವ್ಯಾಪಾರ ಸಂಬಂಧ ಹೊಂದಿರುವ ಎರಿಕ್​ಸನ್ ಭಾರತದಾದ್ಯಂತ ಕನೆಕ್ಟಿವಿಟಿ ಸೇವೆ ಒದಗಿಸುತ್ತಿದೆ. ಜುಲೈ 26ರಂದು ಅಂತ್ಯಗೊಂಡ 5ಜಿ ತರಂಗಾಂತರ ಹರಾಜಿನ ನಂತರ ಎರಿಕ್​ಸನ್​ಗೆ ಹೊಸ ಗುತ್ತಿಗೆಯನ್ನು ಏರ್​ಟೆಲ್ ನೀಡಿದೆ.

ಎರಿಕ್​ಸನ್ ರೇಡಿಯೊ ಸಿಸ್ಟಮ್ ಮತ್ತು ಎರಿಕ್​ಸನ್ ಮೈಕ್ರೊವೈವ್ ಮೊಬೈಲ್ ಟ್ರಾನ್ಸ್​ಪೋರ್ಟ್​ ಸಲ್ಯೂಷನ್​ನಿಂದ ಪಡೆದುಕೊಂಡ 5ಜಿ ರೇಡಿಯೊ ಅಕ್ಸೆಸ್ ನೆಟ್​ವರ್ಕ್​ ಉತ್ಪನ್ನಗಳನ್ನು ಏರ್​ಟೆಲ್ ಅಳವಡಿಸಲಿದೆ. ದೊಡ್ಡಮಟ್ಟದ ಡೇಟಾ ನಿರ್ವಹಣಾ ಸಾಮರ್ಥ್ಯ ಮತ್ತು ವೇಗದ ದತ್ತಾಂಶ ವರ್ಗಾವಣೆ ಸೌಲಭ್ಯವನ್ನು ಈ ಸೇವೆಗಳು ಒದಗಿಸುತ್ತವೆ ಎಂದು ಭಾರ್ತಿ ಏರ್​ಟೆಲ್ ಪ್ರಕಟಣೆಯಲ್ಲಿ ತಿಳಿಸಿದೆ.

- Advertisment -

Most Popular

Recent Comments