ಚೆನ್ನೈ: ತಮಿಳುನಾಡಿನ ತಿರುವೈಕಲ್ನ ದೇವಸ್ಥಾನದಲ್ಲಿ ನೂರಾರು ಚಿನ್ನದ ನಾಣ್ಯಗಳ ನಿಧಿಯೊಂದು ಪತ್ತೆಯಾಗಿದೆ.
ಅಖಿಲಾಂಡೇಶ್ವರಿ ಜಂಭುಕೇಶ್ವರ ದೇವಾಲಯದ ನವೀಕರಣ ಕೆಲಸಗಳನ್ನು ಮಾಡಲು ನೆಲವನ್ನು ಅಗೆಯುತ್ತಿದ್ದ ಕಾರ್ಮಿಕರಿಗೆ ಈ ನಿಧಿ ಸಿಕ್ಕಿದೆ. ಅದರಲ್ಲಿ 505 ಚಿನ್ನದ ನಾಣ್ಯಗಳು ಇದ್ದು ಬರೋಬ್ಬರಿ 1716 ಕೆ.ಜಿ ತೂಕವನ್ನು ಹೊಂದಿದೆ. ಇದರ ಬೆಲೆ ಅಂದಾಜು 68 ಲಕ್ಷ ರೂ ಇರಬಹುದು. ಈ ನಾಣ್ಯಗಳಲ್ಲಿ ಅರೆಬಿಕ್ ಲಿಪಿಗಳನ್ನು ಹೋಲುವ ಅಕ್ಷರಗಳನ್ನು ಹೊಂದಿದ್ದು, ಇದು ಸುಮಾರು ಕ್ರಿ.ಶ 1000 – 1200ನೇ ಕಾಲದ್ದಾಗಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಈ ಮಾಹಿತಿ ಹೊರಬೀಳುತ್ತಿದ್ದಂತೆ ಸ್ಥಳಕ್ಕೆ ಹಿಂದೂ ಧಾರ್ಮಿಕ ಮತ್ತು ಚಾರಿಟೇಬಲ್ ಎಂಡೋಮೆಂಟ್ ಅಧಿಕಾರಿಗಳು ನಿಧಿಯನ್ನು ವಶಪಡಿಸಿಕೊಂಡರು. ಅಲ್ಲದೆ ಪೊಲೀಸರ ಸಮ್ಮುಖದಲ್ಲಿ ನಾಣ್ಯಗಳನ್ನು ಎಣಿಕೆ ಮಾಡಿದರು. ಇನ್ನು ನಾಣ್ಯಗಳ ಮೌಲ್ಯ ಹಾಗೂ ಅವಧಿಯನ್ನು ಖಚಿತಪಡಿಸಿಕೊಳ್ಳಲು ಪುರಾತತ್ವ ಇಲಾಖೆಗೆ ಆದೇಶ ನೀಡಲಾಗಿದೆ. ಅಲ್ಲಿಯವರೆಗೂ ನಾಣ್ಯಗಳನ್ನು ಜಿಲ್ಲಾ ಖಜಾನೆಯಲ್ಲಿ ಇಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
Tamil Nadu: 505 gold coins weighing 1.716 kg found in a vessel during digging at Jambukeswarar Temple in Thiruvanaikaval, Tiruchirappalli district yesterday. Coins were later handed over to the police. pic.twitter.com/1zYHJZ2MLd
— ANI (@ANI) February 27, 2020