Thursday, October 6, 2022
Powertv Logo
Homeರಾಜ್ಯಹುಬ್ಬಳ್ಳಿಯಲ್ಲಿ ಐದು ಮಂದಿ ಪೊಲೀಸರಿಗೆ ಹೋಂ ಕ್ವಾರಂಟೈನ್

ಹುಬ್ಬಳ್ಳಿಯಲ್ಲಿ ಐದು ಮಂದಿ ಪೊಲೀಸರಿಗೆ ಹೋಂ ಕ್ವಾರಂಟೈನ್

ಹುಬ್ಬಳ್ಳಿ: ಲಾಕ್​ಡೌನ್ ಆದೇಶವನ್ನು ಘೋಷಿಸಿದಾಗಿನಿಂದಲೂ ಪೊಲೀಸರು ಹಗಲು ರಾತ್ರಿ ಎನ್ನದೆ ಸೇವೆ ಮಾಡುತ್ತಿದ್ದಾರೆ. ಆದರೆ ಇದೀಗ ಈ ಮಹಾಮಾರಿ ಕೊರೋನಾ ವೈರಸ್ ಕಾಟ ಪೊಲೀಸರನ್ನು ಕಾಡುತ್ತಿದೆ. ಹುಬ್ಬಳ್ಳಿಯ ಕಮರಿಪೇಟೆ ಪೊಲೀಸ್ ಠಾಣೆಯ ಐದು ಮಂದಿ ಪೊಲೀಸರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ.

ಕಮರಿಪೇಟೆ ಮುಲ್ಲಾ ಓಣಿಯ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಪೊಲೀಸರಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಇದೀಗ ಅವರ ಕೈಗೆ ಆರೋಗ್ಯ ಇಲಾಖೆ ಸೀಲ್​​ಗಳನ್ನು ಹಾಕಿದ್ದು, ಅವರಿಗೆ ಹೋಂ ಕ್ವಾರಂಟೈನ್​ನಲ್ಲಿರುವಂತೆ ಸೂಚಿಸಲಾಗಿದೆ. 

- Advertisment -

Most Popular

Recent Comments