ಮುಂಬೈ: ಮಹಾಮಾರಿ ಕೊರೋನಾ ವೈರಸ್ ಈಗಾಗಲೇ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ. ಇದೀಗ ಷೇರು ಮಾರುಕಟ್ಟೆಗಳಿಗೂ ಕೊರೋನಾ ವೈರಸ್ನ ಬಿಸಿ ತಟ್ಟಿದೆ.
ಕೊರೋನಾ ವೈರಸ್ ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತಿದ್ದು, ಭಾರತದಲ್ಲಿ ಸೆನ್ಸೆಕ್ಸ್ 1,100 ಪಾಯಿಂಟ್ ಕುಸಿಯುವ ಮೂಲಕ 38,601ಕ್ಕೆ ಇಳಿದಿದೆ. ಆರನೇ ದಿನಕ್ಕೆ ವಿಸ್ತರಿಸಿದ ಮಾರಾಟದಲ್ಲಿ ಕೇವಲ ಸೆಕೆಂಡುಗಳ ಅವಧಿಯಲ್ಲಿ ಹೂಡಿಕೆದಾರರು 3.5 ಲಕ್ಷ ಕೋಟಿಗೂ ಹೆಚ್ಚು ಹಣ ನಷ್ಟ ಕಂಡಿದ್ದಾರೆ. ನಿಫ್ಟಿ 11,350 ಪಾಯಿಂಟ್ಗೆ ಕುಸಿತ ಕಂಡಿದ್ದು, 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಜಾಗತಿಕ ಮಾರುಕಟ್ಟೆ ಇದೇ ಮೊದಲ ಬಾರಿಗೆ ಈ ರೀತಿಯ ಪರಿಣಾಮ ಎದುರಿಸುವಂತಾಗಿದೆ. ಇದರಿಂದಾಗಿ ಆರ್ಥಿಕ ಹಿಂಜರಿತ ಆಗುವ ಸಾಧ್ಯತೆಯಿದ್ದು, ಅದರ ಭಯವು ಎಲ್ಲರನ್ನು ಕಾಡುತ್ತಿದೆ.