ಎಲ್​ಜಿ ಪಾಲಿಮರ್ಸ್ ಫ್ಯಾಕ್ಟರಿಯಲ್ಲಿ ವಿಷ ಅನಿಲ ಸೋರಿಕೆ : ಎಂಟು ಮಂದಿ ಸಾವು, 200 ಜನ ಅಸ್ವಸ್ಥ

0
492

ವಿಶಾಖಪಟ್ಟಣ: ಆರ್.ಆರ್. ವೆಂಕಟಪುರಂ ಗ್ರಾಮದಲ್ಲಿರುವ ಎಲ್​ಜಿ ಪಾಲಿಮರ್ಸ್ ಫ್ಯಾಕ್ಟರಿಯಲ್ಲಿ ವಿಷ ಅನಿಲ ಸೋರಿಕೆಯಿಂದ ಎಂಟು ಮಂದಿ ಮೃತಪಟ್ಟಿದ್ದು, 200 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ.

ಬೆಳಗ್ಗಿನ ತಡರಾತ್ರಿ 2.30ಕ್ಕೆ ಫ್ಯಾಕ್ಟರಿಯಲ್ಲಿ ಪಿವಿಸಿ ಗ್ಯಾಸ್ ಸೋರಿಕೆಯಾಗಿದೆ. ಇದು ಗಾಳಿಯಲ್ಲಿ ಬಹುಬೇಗನೆ ಮಿಶ್ರಣಗೊಳ್ಳುತ್ತದೆ. ಹಾಗಾಗಿ ಜನ ಗಾಳಿಯೊಂದಿಗೆ ವಿಷ ಅನಿಲವನ್ನು ಸೇವಿಸಿದ್ದಾರೆ. 

ಸದ್ಯ ಸ್ಥಳಕ್ಕೆ ಪೊಲೀಸರು, ಅಗ್ನಿಶಮಕ ದಳ, ಆ್ಯಂಬುಲೆನ್ಸ್​ಗಳು ಆಗಮಿಸಿದ್ದು, ಅಸ್ವಸ್ಥರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನು ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ವಿಶಾಖಪಟ್ಟಣ ಪಾಲಿಕೆ ಅಕ್ಕಪಕ್ಕದ ಸ್ಥಳಿಯವರಿಗೆ ಯಾರೂ ಮನೆಯಿಮದ ಹೊರಬರದಂತೆ ಮಾಹಿತಿ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮುಖಕ್ಕೆ ಒದ್ದೆ ಬಟ್ಟೆಯನ್ನು ಬಾಯಿ ಹಾಗೂ ಮೂಗನ್ನು ಮುಚ್ಚಿಕೊಳ್ಳಿ ಎಂದು ಹೇಳಿದ್ದಾರೆ. 

 

 

LEAVE A REPLY

Please enter your comment!
Please enter your name here