ಮಸೀದಿಯಲ್ಲಿ ಗುಂಡಿನ ದಾಳಿ – 40ಕ್ಕೂ ಹೆಚ್ಚು ಮಂದಿ ಸಾವು

0
130

ಕ್ರೈಸ್ಟ್​ಚರ್ಚ್​: ಅಲ್​​ನೂರ್ ಮಸೀದಿಯಲ್ಲಿ ಬಂದೂಕುಧಾರಿಯೊಬ್ಬ ಫೈರಿಂಗ್ ನಡೆಸಿದ್ದು, ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ. ನ್ಯೂಜಿಲೆಂಡ್​ನ ಕ್ರೈಸ್ಟ್ ಚರ್ಚ್​ನ ಅಲ್​ನೂರ್ ಮಸೀದಿಯಲ್ಲಿ ಘಟನೆ ನಡೆದಿದ್ದು 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಲಿನ್​ವುಡ್​ ಮಸೀದಿಯಲ್ಲಿ 10 ಜನ ಮೃತಪಟ್ಟಿದ್ದಾರೆ. ದುಷ್ಕರ್ಮಿಗಳು ಸುಮಾರು 50 ಸುತ್ತು ಗುಂಡು ಹಾರಿಸಿದ್ದಾರೆ.  ಫೈರಿಂಗ್ ವೇಳೆ ಬಾಂಗ್ಲಾ ಕ್ರಿಕೆಟಿಗರೂ ಸ್ಥಳದಲ್ಲಿದ್ದರು. ಅದೃಷ್ಟವಶಾತ್ ಕ್ರಿಕೆಟಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಾಳಿ ನಡೆದ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್​ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಶಂಕಿತ ವಾಹನಗಳಲ್ಲಿ ಅಳವಡಿಸಲಾಗಿದ್ದ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

ಓರ್ವ ಬಂದೂಕುಧಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಕ್ರೈಸ್ಟ್​ ಚರ್ಚ್​ ಮಸೀದಿಯಲ್ಲಿ ಫೈರಿಂಗ್​ ನಡೆದಿದ್ದು, ಪೊಲೀಸರು ಬಂಧಿಸಿರುವ ವ್ಯಕ್ತಿ ಆಸ್ಟ್ರೇಲಿಯಾದ ಪ್ರತ್ಯೇಕತಾವಾದಿ ಎಂದು ಶಂಕಿಸಲಾಗಿದೆ.

ಈ ದಿನವನ್ನು ನ್ಯೂಜಿಲೆಂಡ್​ನ ಕರಾಳ ದಿನಗಳಲ್ಲಿ ಒಂದು ಅಂತ ಕರೆದಿರುವ ಅಲ್ಲಿನ ಪ್ರಧಾನಿ ಜಸಿಂದಾ ಆರ್ಡರ್ನ್​, ಇದೊಂದು ಭಯೋತ್ಪಾದಕ ದಾಳಿ ಎಂಬುದರಲ್ಲಿ ಸಂಶಯವಿಲ್ಲ. ಘಟನೆಯನ್ನು ಗಮನಿಸಿದರೆ ಇಂದೊಂದು ಪೂರ್ವ ಯೋಜಿತದಾಳಿ ಅನ್ನೋದು ತಿಳಿದುಬರುತ್ತದೆ. ಎಷ್ಟು ಜನ ದಾಳಿ ಮಾಡಿದ್ದಾರೆಂಬುದರ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಮೂವರನ್ನು ಬಂಧಿಸಲಾಗಿದೆ ಅಂತ ಹೇಳಿದ್ದಾರೆ.

LEAVE A REPLY

Please enter your comment!
Please enter your name here