ಹುತಾತ್ಮರ ಸಂಖ್ಯೆ 40ಕ್ಕೆ ಏರಿಕೆ: ಕೇಂದ್ರದಿಂದ ಉನ್ನತ ಮಟ್ಟದ ಸಭೆ

0
255

ದೆಹಲಿ: ಪುಲ್ವಾಮ ಜಿಲ್ಲೆಯಲ್ಲಿ ಸಿಆರ್​ಪಿಎಫ್ ಯೋಧರ ವಾಹನದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದವರ ಸಂಖ್ಯೆ 40ಕ್ಕೆ ಏರಿದೆ. ಇಂದು ಕೇಂದ್ರ ಸರ್ಕಾರದಿಂದ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ಸಭೆಯಲ್ಲಿ ದಾಳಿ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದು, ಗೃಹ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​, ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭಾಗಿಯಾಗಲಿದ್ದಾರೆ. ಸಚಿವ ರಾಜನಾಥ್​ ಸಿಂಗ್ ಇಂದು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಆವಂತಿಪೊರದಲ್ಲಿ ನಡೆದ ಉಗ್ರರ ದಾಳಿ ಬಗ್ಗೆ ವಿವರ ಸಂಗ್ರಹ ಮಾಡಲಿದ್ದಾರೆ.

ಘಟನಾ ಸ್ಥಳಕ್ಕೆ ಎನ್​ಐಎ, ಎನ್​ಎಸ್​ಜಿ, ತಂಡಗಳು ಪರಿಶೀಲನೆ ನಡೆಸಲಿದ್ದಾರೆ. ಘಟನೆ ಬಗ್ಗೆ ಪಾಕಿಸ್ತಾನ ವಿದೇಶಾಂಗ ಸಚಿವರು ಪ್ರತಿಕ್ರಿಯಿಸಿ, “ಪುಲ್ವಾಮದ ದಾಳಿಯನ್ನು ನಾವು ಖಂಡಿಸುತ್ತೇವೆ. ಎಲ್ಲಿಯೇ ಹಿಂಸೆ ನಡೆದ್ರೂ ನಾವು ಖಂಡಿಸುತ್ತೇವೆ. ನಮಗೂ ಈ ದಾಳಿಗೂ ಯಾವುದೇ ಸಂಬಂಧವಿಲ್ಲ” ಅಂತ ಹೇಳಿದ್ದಾರೆ.

ಕಣಿವೆ ರಾಜ್ಯ ಸಂಪೂರ್ಣ ಬಂದ್​​: ಉಗ್ರರ ದಾಳಿ ಖಂಡಿಸಿ ಇಂದು ಕಣಿವೆ ರಾಜ್ಯ ಸಂಪೂರ್ಣ ಬಂದ್​​ಗೆ ಕರೆ ನೀಡಲಾಗಿದೆ. ಜಮ್ಮು ಕಾಮರ್ಸ್​ ಆಂಡ್​ ಇಂಡಸ್ಟೀಸ್ ವತಿಯಿಂದ ನಡೆಯುವ ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಲು ನಿರ್ಧರಿಸಲಾಗಿದೆ.​​ ಬೆಳಗ್ಗೆ 10.30ರ ಸುಮಾರಿಗೆ ಪ್ರತಿಭಟನೆ ಪ್ರಾರಂಭವಾಗಲಿದೆ. ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ ಖಂಡಿಸಿ ನಾಡಿನಾದ್ಯಂತ ಪ್ರತಿಭಟನೆ ನಡೆಸಲಾಗ್ತಿದ್ದು, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕ್ಯಾಂಡಲ್​ ಹಚ್ಚಿ ಹುತಾತ್ಮರಾದ 40ಯೋಧರ ಆತ್ಮಕ್ಕೆ ಶಾಂತಿ ಕೋರಲಾಯ್ತು. ಇತ್ತ ಕೊಪ್ಪಳ, ಚಿಕ್ಕಬಳ್ಳಾಪುರ,  ಆನೇಕಲ್​, ದಾವಣಗೆರೆ, ಧಾರವಾಡ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಲಾಯ್ತು.

LEAVE A REPLY

Please enter your comment!
Please enter your name here