ಶ್ರೀಲಂಕಾ ಸ್ಫೋಟದಲ್ಲಿ 5 ಮಂದಿ ಕನ್ನಡಿಗರು ಸಾವು

0
167

ನವದೆಹಲಿ: ಶ್ರೀಲಂಕಾದಲ್ಲಿ ನಡೆದ ಸ್ಫೋಟದಲ್ಲಿ ಐವರು ಕನ್ನಡಿಗರು ಸಾವನ್ನಪ್ಪಿದ್ದಾರೆ. ಅಡಕಮಾರನಹಳ್ಳಿ ಮೂಲದ ಲಕ್ಷ್ಮಿನಾರಾಯಣ,  ವಿದ್ಯಾರಣ್ಯಪುರ ರಂಗಪ್ಪ, ಬೆಂಗಳೂರಿನ ಪೀಣ್ಯದ ಕೆ.ಜಿ.ಹನುಮಂತರಾಯಪ್ಪ, ನೆಲಮಂಗಲ ಮೂಲದ ಶಿವಣ್ಣ, ತುಮಕೂರು ಉದ್ಯಮಿ ರಮೇಶ್​ ಮೃತರು. ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದ ಬಳಿಕ ಮೂವರು ನಾಪತ್ತೆಯಾಗಿದ್ದಾರೆ. ನೆಲಮಂಗಲ ತಾಲೂಕಿನ ಹಾರೋ ಕೇತನಹಳ್ಳಿ ಮೂಲದ ಪುಟ್ಟರಾಜು, ನೆಲಮಂಗಲ ತಾಲೂಕಿನ ಅಡಕಮಾರನಹಳ್ಳಿ ಮಾರೇಗೌಡ ನಾಪತ್ತೆಯಾಗಿದ್ದಾರೆ.

ಕೊಲಂಬೊ ಸ್ಫೋಟದಲ್ಲಿ ಸಾವನ್ನಪ್ಪಿರುವ ಬೆಂಗಳೂರು ಮೂಲದ ಶಿವಣ್ಣ ನೆಲಮಂಗಲ ತಾಲೂಕು ಗೋವೆನಹಳ್ಳಿ ನಿವಾಸಿ. ಶಾಸಕ ಶ್ರೀನಿವಾಸಮೂರ್ತಿ ಅವರ ಆಪ್ತರಾಗಿದ್ದ ಶಿವಣ್ಣ ಪಿಡಬ್ಲ್ಯೂಡಿ ಕ್ಲಾಸ್‌1 ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದರು. 20 ವರ್ಷಗಳಿಂದ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದು, ಜೆಡಿಎಸ್ ಪಕ್ಷದಲ್ಲಿ ನೆಲಮಂಗಲ ತಾಲೂಕಿನ ಪ್ರಭಾವಿ ಮುಖಂಡರಾಗಿದ್ದರು.

ತುಮಕೂರಿನ ಸರಸ್ವತಿಪುರಂ ನಿವಾಸಿ ಉದ್ಯಮಿ ರಮೇಶ್​ (45) ನಗರದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಹೊಂದಿದ್ದರು. ಸ್ನೇಹಿತರ ಜೊತೆ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು. ರಮೇಶ್​ ಮನೆಯಲ್ಲಿ ಕುಟುಂಬಸ್ಥರು, ಸಂಬಂಧಿಗಳ ಆಕ್ರಂದನ ಮುಗಿಲುಮುಟ್ಟಿದೆ. ನೆಲಮಂಗಲ ಮೂಲದ ಲಕ್ಷ್ಮಿ ನಾರಾಯಣ ಅವರೂ ಶ್ರೀಲಂಕಾದಲ್ಲಿ ಸಾವನ್ನಪ್ಪಿದ್ದಾರೆ. ಪಾಸ್‌ಪೋರ್ಟ್ ನೋಡೋ ಮೂಲಕ ಸಂಬಂಧಿಕರು ಗುರುತು ಖಚಿತ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here