ವಾಯುಪಡೆಗೆ 4 ಹೊಸ ಚಿನೂಕ್ ಹೆಲಿಕಾಪ್ಟರ್

0
198

ದೆಹಲಿ: ಅಮೆರಿಕದ ಬೋಯಿಂಗ್ ಸಂಸ್ಥೆ ನಿರ್ವಿುತ ನಾಲ್ಕು ಅತ್ಯಾಧುನಿಕ ಚಿನೂಕ್ ಹೆಲಿಕಾಪ್ಟರ್​ಗಳು ಗುಜರಾತ್​ನ ಮುಂದ್ರಾ ಬಂದರಿಗೆ ಭಾನುವಾರ ಬಂದಿವೆ. ಇವುಗಳನ್ನು ಗುಜರಾತ್​ನಲ್ಲೆ ಜೋಡಣೆ ಮಾಡಿ ನಂತರ ಚಂಡೀಗಢಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಇವು ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗುತ್ತವೆ.

ಚಿನೂಕ್ ಹೆಲಿಕಾಪ್ಟರ್​ಗಳು ಅತಿ ಎತ್ತರದ ಪ್ರದೇಶಕ್ಕೂ ಅಧಿಕ ತೂಕದ ಸಾಮಗ್ರಿಗಳನ್ನು ಹೊತ್ತು ಹಾರಬಲ್ಲ ಸಾಮರ್ಥ್ಯ ಹೊಂದಿವೆ. ಟ್ರೂಪ್​ಗಳೂ, ಶಸ್ತ್ರಾಸ್ತ್ರಗಳು, ಇಂಧನವನ್ನೂ ಸಾಗಿಸಲು ಇದು ನೆರವಾಗಲಿದೆ. ಹಾಗೇ ನೈಸರ್ಗಿಕ ವಿಕೋಪಗಳು, ದರಂತಗಳ ಸಂದರ್ಭದಲ್ಲಿಯೂ ಇದು ನೆರವಾಗಲಿದೆ. ಭಾರತೀಯ ವಾಯುಪಡೆಗೆ 22 ಹೆಲೆಕಾಪ್ಟರ್ ಹಾಗೂ 15 ಚಿನೂಕ್ಸ್​ ನಿರ್ಮಿಸಿಕೊಡುವುದಕ್ಕೆ 2015ರಲ್ಲಿ ಭಾರತ ಬೋಯಿಂಗ್​ ಜೊತೆ ಒಪ್ಪಂದ ಮಾಡಿಕೊಂಡಿತ್ತು.

LEAVE A REPLY

Please enter your comment!
Please enter your name here