ಹೈದರಾಬಾದ್ : ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್ಕೌಂಟರ್ ಮಾಡಲಾಗಿದೆ. ಮಹಜರಿಗೆಂದು ಆರೋಪಿಗಳನ್ನು ಘಟನಾ ಸ್ಥಳಕ್ಕೆ ಪೊಲೀಸರು ಕರೆದುಕೊಂಡು ಹೋದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದು ,ಈ ವೇಳೆ ಸೈಬರಾಬಾದ್ ಪೊಲೀಸ್ ಕಮಿಷನರ್ ವಿಶ್ವನಾಥ್ ಸಜ್ಜನರ್ ಆರೋಪಿಗಳನ್ನು ಎನ್ಕೌಂಟರ್ ಮಾಡಿದ್ದಾರೆ.
ಜೈಲಿನಲ್ಲಿದ್ದ ಆರೋಪಿಗಳಾದ ಆರಿಫ್, ಚನ್ನಕೇಶವುಲು, ಶಿವ ಹಾಗೂ ನವೀನ್ ಎಂಬ ಪಾಪಿಗಳನ್ನು ಹೈದರಾಬಾದ್ ಶಾದ್ ನಗರ ಬಳಿಯ ರಾಷ್ಟ್ರಿಯ ಹೆದ್ದಾರಿ 44ಕ್ಕೆ ಬೆಳಗ್ಗಿನ ಜಾವ 3:30 ಕ್ಕೆ ಕರೆದೊಯ್ದಿದ್ದರು. ಈ ವೇಳೆ ಅವಕಾಶ ನೋಡಿ ಪೊಲೀಸರ ಮೇಲೆ ಕಲ್ಲು ತೂರಿ ತಪ್ಪಸಿಕೊಳ್ಳಲು ಪ್ರಯತ್ನಿಸಿ ಎನ್ಕೌಂಟರ್ಗೆ ಹತರಾಗಿದ್ದಾರೆ.