ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಈ ಹೆಸರು ಯಾರಿಗ್ತಾನೆ ಗೊತ್ತಿಲ್ಲ ಹೇಳಿ ಕನ್ನಡ ಸಿನಿಮಾವನ್ನ ಇಡೀ ಭಾರತ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್ ಚಿತ್ರದ ನಾಯಕ ನಟ ರಾಕಿ ಭಾಯ್ ಅಲಿಯಾಸ್ ಯಶ್ಗಿಂದು, 35ನೇ ವಸಂತದ ಸಂಭ್ರಮ , ಆದರೆ ಕರೋನಾ ಹಿನ್ನಲೆಯಲ್ಲಿ ಈ ವರ್ಷ ಬರ್ತಡೆಯನ್ನ ಆಚರಿಸಿಕೊಳ್ಳಲ್ಲ ಎಲ್ಲರೂ ಎಲ್ಲಿದ್ದೀರೋ ಅಲ್ಲಿಂದನೇ ವಿಶ್ ಮಾಡಿ ಎಂದು ನಟ ಯಶ್ ಮನವಿ ಮಾಡಿದ್ದಾರೆ.
ಇನ್ನೂ ಯಶ್ ಅವರ ಮನವಿಗೆ ಸ್ಪಂದಿಸಿದ ಅವರ ಅಭಿಮಾನಿಗಳು , ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿ ಸಂಭ್ರಮಪಟ್ಟರು. ಆದರೆ ಕೆಲವೊಂದು ಅಭಿಮಾನಿಗಳು ಮಾತ್ರ ರಾಕಿ ಭಾಯ್ ನ್ನ ನೋಡಲೇಬೇಕು ಅಂತ ದೂರದ ಊರುಗಳಿಂದ ಯಶ್ ಅವರ ಕತ್ರಿಗುಪ್ಪೆ ನಿವಾಸದ ಬಳಿ ಬಂದಿದ್ದರು. ಆದರೆ ಯಶ್ ಮನೆಯಲ್ಲಿ ಇಲ್ಲದಿರುವ ಕಾರಣ ನಿರಾಸೆಯಿಂದ ವಾಪಸ್ ಹೋದರು. ಇನ್ನೂ ಅವರ ಬರ್ತಡೇಗೆ ಬೆಳಿಗ್ಗೆ 10:18 ಕ್ಕೆ ರಿಲೀಸ್ ಆಗಬೇಕಿದ್ದ ಕೆಜಿಎಫ್ 2 ಟೀಸರ್ ಕೂಡ ಹಿಂದಿನ ದಿನವೇ ರಿಲೀಸ್ ಆಯ್ತು, ಆದರೆ ಇದೀಗ ಟೀಸರ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಕೆಜಿಎಫ್ 2 ಕೂಡ ಭರ್ಜರಿ ಯಶಸ್ಸು ಕಾಣುವ ನಿರೀಕ್ಷೆಯಿದೆ. ಇನ್ನೂ ಇದೇ ರೀತಿ ಯಶ್ ರವರು ಯಶಸ್ಸಿನ ಉತ್ತುಂಗಕ್ಕೆ ಏರಲಿ ಅಂತ ಹಾರೈಸ್ತಾ ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯ ರಾಕಿ ಭಾಯ್ ಎಂದು ಅಭಿಮಾನಿಗಳು ವಿಶ್ ಮಾಡಿದ್ದಾರೆ.