Thursday, October 6, 2022
Powertv Logo
Homeದೇಶಅಮೆರಿಕಾ ರಾಯಭಾರಿ ಕಚೇರಿ ಮೇಲೆ ಮತ್ತೆ ದಾಳಿ!

ಅಮೆರಿಕಾ ರಾಯಭಾರಿ ಕಚೇರಿ ಮೇಲೆ ಮತ್ತೆ ದಾಳಿ!

ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್​ನಲ್ಲಿರುವ ಅಮೆರಿಕಾ ರಾಯಭಾರಿ ಕಚೇರಿಯ ಸಮೀಪವೇ 3 ರಾಕೆಟ್ ಗಳು ಅಪ್ಪಳಿಸಿವೆ. ಸದ್ಯ ಯಾವುದೇ ಪ್ರಾಣಪಾಯವಾಗಿಲ್ಲ ಎಂದು ಭದ್ರತಾ ಮೂಲಗಳು ತಿಳಿಸಿವೆ.

ಇರಾಕ್ ರಾಜಧಾನಿಯಲ್ಲಿರುವ ಗ್ರೀನ್ ಝೋನ್ ಅನ್ನು ಗುರಿಯಾಗಿಸಿಕೊಂಡು ರಾಕೆಟ್ ದಾಳಿ ನಡೆಸಲಾಗಿದೆ. ಆ ಮೂಲಕ ಈಗಾಗಲೇ ಆವರಿಸಿರುವ ಯುದ್ಧ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅಮೇರಿಕಾ, ಇತ್ತೀಚೆಗೆ ಅಮೇರಿಕಾ ರಾಯಭಾರಿ ಕಚೇರಿಯ ಗ್ರೀನ್​ ಝೋನ್​ ಮೇಲೆ ಇರಾನ್​ ಬೆಂಬಲಿತ ಪ್ಯಾರಾ ಮಿಲಿಟರಿ ಪಡೆಯು ಇದೇ ರೀತಿ ದಾಳಿ ನಡೆಸಿತ್ತು. ಆದರೆ ಇದನ್ನು ಒಪ್ಪಿಕೊಳ್ಳಲು ಮಾತ್ರ ಇರಾನ್ ಹಿಂದೇಟು ಹಾಕುತ್ತಿದೆ ಎಂದು ಅಮೇರಿಕಾ ಹರಿಹಾಯ್ದಿದೆ.

 

- Advertisment -

Most Popular

Recent Comments