ಕೊರೋನಾ ನಡುವೆ ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಕೊರೋನಾ ಹಿನ್ನಲೆ ವಿದ್ಯಾರ್ಥಿಗಳಿಗೆ ಎಸ್ ಎಂ ಎಸ್ ಮೂಲಕ ರಿಸೆಲ್ಟ್ ನೀಡಲಾಗಿದೆ. ಇನ್ನು ವಿದ್ಯಾರ್ಥಿಗಳು ತಮ್ಮ ರಿಸೆಲ್ಟ್ ಅನ್ನು www.karresult.nic.in ನಲ್ಲಿ ನೋಡಬಹುದು. ಇನ್ನು ಈ ಕುರಿತು ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ “ಈ ಬಾರಿ ಪರೀಕ್ಷೆಯಲ್ಲಿ ಹಾಜರಾಗಿದ್ದ ಹೊಸಬರು 5,56,267 ವಿದ್ಯಾರ್ಥಿಗಳು, ಹೊಸಬರಲ್ಲಿ 3,84947 ಮಂದಿ ಪಾಸ್ ಆಗಿದ್ದಾರೆ. ಈ ವರ್ಷ ವಿಜ್ಞಾನ ವಿಭಾಗದಲ್ಲಿ ಪಾಸ್ ಆದವರ ಪ್ರಮಾಣ 76.2 ಪೆರ್ಸೆಂಟ್” ಎಂದು ಹೇಳಿದರು