ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೋನಾ ಸೋಂಕಿತ ವ್ಯಕ್ತಿ ಪ್ಲಾಸ್ಮಾ ಥೆರಪಿಯಿಂದ ಗುಣಮುಖರಾಗಿದ್ದು, ರಾಜ್ಯದಲ್ಲಿ 2ನೇ ಪ್ಲಾಸ್ಮಾ ಥೆರಪಿ ಯಶಸ್ವಿಯಾದಂತಾಗಿದೆ.
ಕೊರೋನಾ ತೀವ್ರ ಸ್ವರೂಪದಲ್ಲಿರುವಾಗ ಆಸ್ಪತ್ರೆಗೆ ದಾಖಲಾದ ಮಧ್ಯ ವಯಸ್ಕ ಸೋಂಕಿತನಿಗೆ ಕಳೆದ ಮೇ 27 ರಂದು ಪ್ಲಾಸ್ಮಾ ಥೆರಪಿ ಮಾಡಲಾಗಿತ್ತು. ಬಹುಬೇಗ ಸೋಂಕಿನಿಂದ ಚೇತರಿಸಿಕೊಂಡಿರುವ ರೋಗಿಯು ಕೃತಕ ಆಕ್ಸಿಜನ್ ವ್ಯವಸ್ತೆ ತೆಗೆದಿದ್ದು, ಸ್ವಯಂ ಉಸಿರಾಟ ಆರಂಭಿಸಿದ್ದಾರೆ. ಹಾಗಾಗಿ ಇದೀಗ ಅವರನ್ನು ಸಾಮಾನ್ಯ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ.
ಇನ್ನು ಮೂರು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದ ಸೋಂಕಿತ ವ್ಯಕ್ತಿಯನ್ನು ಪ್ಲಾಸ್ಮಾ ಥೆರಪಿಗೆ ಒಳಪಡಿಸಲಾಗಿದ್ದು, ಆ ವ್ಯಕ್ತಿಯೂ ಗುಣಮುಖರಾಗಿ ರಾಜ್ಯದಲ್ಲಿ ಮೊದಲ ಪ್ಲಾಸ್ಮಾ ಥೆರಪಿ ಯಶಸ್ವಿಯಗಿತ್ತು.