ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಲೇ ಇದೆ. ಕೇವಲ 24 ಗಂಟೆಗಳಲ್ಲಿ ಸೋಂಕಿತರ ಸಂಖ್ಯೆ 384 ಕ್ಕೆ ಏರಿದೆ. ಅದರಲ್ಲಿ 104 ಮಂದಿ ಗುಣಮುಖರಾಗಿದ್ದಾರೆ.
ಒಂದೆಡೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದರೆ, ಇನ್ನೊಂದೆಡೆ ಸಾವಿನಪ್ಪಿದವರ ಸಂಖ್ಯೆಯೂ ಏರುತ್ತಿದೆ. ಕೇವಲ 24 ಗಂಟೆಯಲ್ಲಿ 25 ಜನರಿಗೆ ಸೋಂಕು ತಗುಲಿದೆ. ಈವರೆಗೆ ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 14 ಕ್ಕೇರಿಕೆಯಾಗಿದೆ. ಇಂದು ಕಂಡುಬಂದ ಸೋಂಕಿತರಲ್ಲಿ ಮೈಸೂರಲ್ಲಿ 7 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಬಾಗಲಕೋಟೆಯಲ್ಲಿ 7, ಕಲಬುರಗಿ ಹಾಗೂ ವಿಜಯಪುರದಲ್ಲಿ ತಲಾ ಇಬ್ಬರಿಗೆ ಸೋಂಕು ಬಂದಿದೆ. ಮಂಡ್ಯ, ಗದಗ, ಹುಬ್ಬಳ್ಳಿ-ಧಾರವಾಡ, ಬೆಳಗಾವಿಯಲ್ಲಿ ತಲಾ 1 ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. ಇನ್ನು ಬೆಂಗಳೂರಲ್ಲಿ ಇಂದು ಸೋಂಕು ಪತ್ತೆಯಾಗಿಲ್ಲ ಎಂದು ಖುಷಿಪಡುವಷ್ಟರಲ್ಲೇ 3 ಪ್ರಕರಣ ಪತ್ತೆಯಾಗಿದೆ.