ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಊಟವನ್ನೇ ನೆಚ್ಚಿಕೊಂಡವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಕೋವಿಡ್ ಸೋಂಕಿನ ಪರಿಣಾಮದಿಂದಾಗಿ ರಾತ್ರಿ 9 ರಿಂದ 10 ಗಂಟೆ ವೇಳೆಗೆಲ್ಲಾ ಬಾಗಿಲು ಹಾಕುತ್ತಿದ್ದ ಹೋಟೆಲ್ಗಳು ಇನ್ನುಂದೆ 24/7 ಓಪನ್ ಇರುತ್ತದೆ.
ಹೊಸ ಆದೇಶ ಹೊರಡಿಸಿದೆ ರಾಜ್ಯ ಸರ್ಕಾರ ಇನ್ಮುಂದೆ ರಾತ್ರಿ ಪೂರ್ತಿ ಹೋಟೆಲ್ಗಳು ದಿನದ 24/7 ಹೋಟೆಲ್ ತೆರೆಯಲು ಅವಕಾಶವನ್ನು ನೀಡಿದೆ. ಹೋಟೆಲ್, ಬೇಕರಿ, ಸ್ವೀಟ್ಸ್ ಸ್ಟಾಲ್, ಐಸ್ಕ್ರೀಂ ಶಾಪ್ ತೆರೆಯಲು ಅವಕಾಶವನ್ನು ನೀಡಿದ್ದಾರೆ.
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರ ಅನುಕೂಲಕ್ಕಾಗಿ ವ್ಯವಸ್ಥೆ ಜಾರಿ ಮಾಡಿದ್ದು, ಸರ್ಕಾರದ ಆದೇಶ ಸ್ವಾಗತಿಸಿದ ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘದ ಮಾಲಿಕರು ಪೊಲೀಸ್ ಇಲಾಖೆಯ ಅನುಮತಿಗಾಗಿ ಕಾಯುತ್ತಿದ್ದಾರೆ. 2021ರಲ್ಲೇ ಅನುಮತಿ ಕೋರಿ ಪತ್ರ ಬರೆದಿದ್ದ ಹೋಟೆಲ್ ಮಾಲೀಕರ ಸಂಘ ಇದೀಗ ಪೊಲೀಸ್ ಇಲಾಖೆಯಿಂದ ಅನುಮತಿ ಸಿಕ್ಕ ಬಳಿಕ 24/7 ಸೇವೆ ಆರಂಭಿಸಲಿದ್ದಾರೆ.