ಬೆಳಗಾವಿ: ರಾಜ್ಯದಲ್ಲಿ ಇಂದು ಪತ್ತೆಯಾದ ಕೊರೋನಾ ಪ್ರಕರಣಗಳಲ್ಲಿ ಬೆಳಗಾವಿ ಒಂದರಲ್ಲೇ 22 ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ. ರಾಜಸ್ಥಾನದ ಅಜ್ಮೀರ್ಗೆ ಪ್ರಯಾಣ ಬೆಳೆಸಿದ್ದರಿಂದ ಈ 22 ಜನರಿಗೂ ಸೋಂಕು ಹರಡಿದೆ ಎಂದು ತಿಳಿದುಬಂದಿದೆ.
ಬೆಳಗಾವಿಯಲ್ಲಿ ಇಂದು ಪತ್ತೆಯಾದ 22 ಜನ ಸೋಂಕಿತರಲ್ಲಿ ಮಕ್ಕಳು ಯುವತಿಯರು ಸೇರಿದಂತೆ ಮಹಿಳೆಯರ ಸಂಖ್ಯೆಯೂ ಹೆಚ್ಚಾಗಿದೆ. 50 ವರ್ಷದ ಮಹಿಳೆ, 17 ವರ್ಷದ ಯುವತಿ, 60 ವರ್ಷದ ಮಹಿಳೆ, 14 ವರ್ಷದ ಬಾಲಕಿ, 40 ವರ್ಷದ ಮಹಿಳೆ, 56 ವರ್ಷದ ಮಹಿಳೆ, 60 ವರ್ಷದ ಮಹಿಳೆ, 25 ವರ್ಷದ ಮಹಿಳೆ, 3 ವರ್ಷದ ಹೆಣ್ಣು ಮಗು, 46 ವರ್ಷದ ಮಹಿಳೆ, 50 ವರ್ಷದ ಮಹಿಳೆ, 27 ವರ್ಷದ ಮಹಿಳೆ, 8 ವರ್ಷದ ಹೆಣ್ಣು ಮಗು ಸೇರಿದಂತೆ ಒಟ್ಟು 12 ಜನ ಸೋಂಕಿತರು ಪತ್ತೆಯಾಗಿದ್ದಾರೆ. 12 ವರ್ಷದ ಬಾಲಕ ,14 ವರ್ಷದ ಬಾಲಕ, 3 ವರ್ಷದ ಗಂಡು , 6 ವರ್ಷದ ಗಂಡು, 38 ವರ್ಷದ ಪುರುಷ, 10 ವರ್ಷದ ಬಾಲಕ, 63 ವರ್ಷದ ಪುರುಷ, 20 ವರ್ಷದ ಯುವಕ, 29 ವರ್ಷದ ಪುರುಷ ಒಟ್ಟು 10 ಜನ ಪುರುಷ ಸೋಂಕಿತರಾಗಿದ್ದಾರೆ.
3travail