Site icon PowerTV

ಪ್ರಿಯಕರನೊಂದಿಗೆ ಪತ್ನಿ ಚಕ್ಕಂದ; ಕೊ*ಲೆ ಮಾಡಿ ರುಂಡದೊಂದಿಗೆ ಪೊಲೀಸ್​ ಠಾಣೆಗೆ ಬಂದ ಪತಿ

ಬೆಂಗಳೂರು: ಪ್ರಿಯಕರನೊಂದಿಗೆ ಚಕ್ಕಂದವಾಡುತ್ತಾ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಪತ್ನಿಯ ಕೊಲೆ ಮಾಡಿ, ಆಕೆಯ ರುಂಡದೊಂದಿಗೆ ಪತಿಯೊಬ್ಬ ಪೊಲೀಸ್​ ಠಾಣೆಗೆ ಬಂದು ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಮೃತ ದುರ್ದೈವಿಯನ್ನು 26 ವರ್ಷದ ಮಾನಸ ಎಂದು ಗುರುತಿಸಲಾಗಿದೆ. ಇದನ್ನೂ ಓದಿ :ಇಂಟಲಿಜೆನ್ಸ್​ ಫೇಲ್​ ಆಗಿದೆ, ಸನ್ಮಾನ ಮಾಡೋ ಅವಶ್ಯಕತೆ ಇರ್ಲಿಲ್ಲ; ರಾಮಲಿಂಗ ರೆಡ್ಡಿ

ಬೆಂಗಳೂರಿನ ಹೊರವಲಯ, ಚಂದಾಪುರ ಸಮೀಪದ ಹೀಲಲಿಗೆ ಗ್ರಾಮದಲ್ಲಿ ಘಟನೆ ನಡೆದಿದೆ. ಕೊಲೆಯಾದ ಮಾನಸ ಮತ್ತು ಹೆನ್ನಾಗರ ಸಮೀಪದ ಕಾಚನಾಯಕನಹಳ್ಳಿ ನಿವಾಸಿ ಶಂಕರ್​ ಪ್ರೀತಿಸಿ ಮದುವೆಯಾಗಿದ್ದರು. ತಿಂಗಳ ಹಿಂದಷ್ಟೇ ಹೀಲಲಗೆ ಗ್ರಾಮದ ಬಾಡಿಗೆ ಮನೆಗೆ ಶಿಫ್ಟ್‌ ಆಗಿದ್ದರು. ಇದೇ ತಿಂಗಳ 3ನೇ ತಾರೀಖು ಶಂಕರ್‌ ಕೆಲಸದ ನಿಮಿತ್ತ ತೆರಳಿದ್ದ, ಹೊರಡುವಾಗ ಮಾರನೆ ದಿನ ಬರುವುದಾಗಿ ಹೇಳಿದ್ದ. ಆದ್ರೆ ಕೆಲಸ ಬೇಗ ಮುಗಿದ ಹಿನ್ನೆಲೆ ಪತ್ನಿ ಒಬ್ಬಳೆ ಇರ್ತಾಳೆಂದು ತಡರಾತ್ರಿಯೇ ವಾಪಸ್‌ ಆಗಿದ್ದ. ಇದನ್ನೂ ಓದಿ :ಪೊಲೀಸ್​ ಕಮಿಷನರ್​ ದಯಾನಂದ ಅಮಾನತು; ಸರ್ಕಾರದ ವಿರುದ್ದ ಹೆಡ್ ಕಾನ್‌ಸ್ಟೇಬಲ್‌ ಪ್ರತಿಭಟನೆ

ಈ ವೇಳೆ ಪತ್ನಿ ಬೆರೋಬ್ಬನ ಜೊತೆ ಪಲ್ಲಂಗದಲ್ಲಿರುವುದನ್ನು ಕಂಡಿದ್ದಾನೆ. ರೆಡ್​ಹ್ಯಾಂಡಡ್​ ಆಗಿ ಸಿಕ್ಕಿಬಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನಿಬ್ಬರಿಗೂ ಶಂಕರ್​ ಆಕ್ರೋಶದಿಂದ ಹಲ್ಲೆ ಮಾಡಿ. ಆಕೆಯನ್ನು ಪ್ರಿಯಕರನ ಜೊತೆಗೆ ಕಳುಹಿಸಿದ್ದಾನೆ. ಅದರೆ ಪತ್ನಿ ಮಾನಸ ಮಾತ್ರ ಪತಿಗೆ ಪದೇ ಪದೇ ಟಾರ್ಚರ್‌ ಮಾಡುತ್ತಿದ್ದಳಂತೆ. ನಿನ್ನೆ ರಾತ್ರಿ ಸಹ ಮನೆಗೆ ಬಂದು ಗಲಾಟೆ ಮಾಡಿದ್ದಳಂತೆ. ಇದರಿಂದ ಬೇಸತ್ತ ಪತಿ ಆಕೆಯ ತಲೆ ಕಡೆದು ಠಾಣೆಗೆ ಸೂರ್ಯನಗರ ಪೊಲೀಸ್‌ ಠಾಣೆಗೆ ತೆಗದುಕೊಂಡು ಬಂದಿದ್ದಾನೆ. ನಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಅಂತರ್​ ರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಪಿಯೂಷ್​ ಚಾವ್ಲಾ

ಘಟನೆ ಸಂಬಂಧ ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಫಾಲೋ ಮಾಡಿ:https://whatsapp.com/channel/0029Va5cjRY9Gv7Tls4bhb1n

Exit mobile version