Site icon PowerTV

ಬ್ಲಾಕ್​ಮೇಲ್​ ಮಾಡಿ ಅಪ್ರಾಪ್ತ ಬಾಲಕಿ ಮೇಲೆ ಮೂವರಿಂದ ಅತ್ಯಾಚಾರ

ಹಾವೇರಿ: ಅಪ್ರಾಪ್ತ ಬಾಲಕಿಯನ್ನ ಪ್ರೀತಿಸುವುದಾಗಿ ಹೇಳಿ ಅತ್ಯಾಚಾರ ಎಸಗಿರುವ ಘಟನೆ ಹಾವೇರಿಯಲ್ಲಿ ನಡೆದಿದ್ದು. ಈ ವಿಷಯವನ್ನ ತಿಳಿದ ಆತನ ಸ್ನೇಹಿತರು ಬಾಲಕಿಗೆ ಬ್ಲಾಕ್​ಮೇಲ್​ ಮಾಡಿ ಸರಣಿ ಅತ್ಯಾಚಾರ ಎಸಗಿದ್ದಾರೆ. ಘಟನೆ ಸಂಬಂಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ :ಅಕ್ರಮ ಸಂಬಂಧಕ್ಕೆ ಸಹಾಯ; ಗುಪ್ತ ರೋಗ ಬಂದಿದ್ದಕ್ಕೆ ಸ್ನೇಹಿತನಿಗೆ ಗುಂಡಿ ತೋಡಿದ ಗೆಳೆಯ

ಹಾವೇರಿಯ ಬಂಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. 15 ವರ್ಷದ ಅಪ್ರಾಪ್ತ ಬಾಲಕಿಯ ಹಿಂದೆ ಬಿದ್ದಿದ್ದ ಗೋಣಿರುದ್ರ ಶಿಗಟ್ಟಿ ಎಂಬಾತ ಬಾಲಕಿಗೆ ಪ್ರೀತ್ಸೆ, ಪ್ರೀತ್ಸೆ ಎಂದು ಒತ್ತಡ ಹೇರಿದ್ದನು. ಇವನ ಮಾತಿಗೆ ಮರುಳಾಗಿದ್ದ ಬಾಲಕಿ ಆತನ ಪ್ರೀತಿಯನ್ನ ಒಪ್ಪಿದ್ದಳು, ಆದರೆ ಇದನ್ನೇ ಅವಕಾಶವಾಗಿ ತೆಗೆದುಕೊಂಡ ಆರೋಪಿ ಬಾಲಕಿಯ ಮೇಲೆ ಅನೇಕ ಅತ್ಯಾಚಾರ ಎಸಗಿದ್ದನು.

ಈ ವಿಷಯವನ್ನ ಗೋಣಿರುದ್ರ ಶಿಗಟ್ಟಿ ಗೆಳೆಯರಾದ ಹೇಮಂತ ಮತ್ತು ಮಂಜುನಾಥ್​ನ ಮುಂದೆ ಹೇಳಿದ್ದನು. ಇದನ್ನ ತಿಳಿದ ಸ್ನೇಹಿತರಿಬ್ಬರು ಬಾಲಕಿಗೆ ಬ್ಲಾಕ್​ ಮೇಲ್​ ಮಾಡಲು ಆರಂಭಿಸಿದ್ದರು. ಬ್ಲಾಕ್​ಮೇಲ್ ಮಾಡಿ ಮೂರು ಜನರನ್ನ ಕಿರಾತಕರು ಬಾಲಕಿ ಮೇಲೆ ಸರಣಿ ಅತ್ಯಾಚಾರ ಎಸಗಿದ್ದರು. ಅಚ್ಚರಿಯ ವಿಷಯವೆಂದರೆ ಬಾಲಕಿಯ ಅಣ್ಣನೇ ಅವಕಾಶ ಬಳಸಿಕೊಂಡು ಈ ದುಷ್ಕೃತ್ಯ ಎಸಗಿದ್ದು. ಈ ದುರುಳರ ನೀಷ ಕೃತ್ಯಕ್ಕೆ ಇದೀಗ ಬಾಲಕಿ ಗರ್ಭವತಿ ಆಗಿದ್ದಾಳೆ. ಇದನ್ನೂ ಓದಿ :‘ನನ್ನ ಮಗನಿಗೆ ಬಂದ ಸ್ಥಿತಿ, ಅವರ ಮಕ್ಕಳಿಗೆ ಬಂದಿದ್ರೆ’| ಮೃತ ಭೂಮಿಕ್​ ತಂದೆ ಆಕ್ರೋಶ

ಘಟನೆ ಸಂಬಂಧ ಬಂಕಾಪುರ ಪೊಲೀಸ್​ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು. ಆರೋಪಿಗಳ ಪೈಕಿ ಓರ್ವ ಆರೋಪಿಯನ್ನು ಬಂಧಿಸಿ ಪೊಲೀಸರು ಕಂಬಿ ಹಿಂದೆ ಅಟ್ಟಿದ್ದಾರೆ.

Exit mobile version