Site icon PowerTV

ನಾನು ಶಿವಣ್ಣ, ದರ್ಶನ್ ಮತ್ತು ಧ್ರುವ ಬಗ್ಗೆ ಮಾತನಾಡಿಲ್ಲ; ಜೈಲಿನಿಂದ ಹೊರಬರುತ್ತಲೆ ಸ್ಪಷ್ಟನೆ ಕೊಟ್ಟ ಮನು

ಬೆಂಗಳೂರು: ಸಹ-ನಟಿ ಮೇಲೆ ಅತ್ಯಾಚಾರ ಮಾಡಿದ ಆರೋಪದಲ್ಲಿ ನಟ ಮಡೆನೂರು ಮನು ಅವರನ್ನು ಬಂಧಿಸಲಾಗಿತ್ತು. ನ್ಯಾಯಾಂಗ ಬಂಧನದಲ್ಲಿ ಇದ್ದ ಮನು ಅವರಿಗೆ ಈಗ ಜಾಮೀನು ದೊರಕಿದ್ದು, ಜೈಲಿನಿಂದ ಹೊರ ಬಂದಿದ್ದಾರೆ. ಜೈಲಿನಿಂದ ಹೊರಬಂದ ಮನು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ನಾನು ಶಿವಣ್ಣ, ದರ್ಶನ್​ ಮತ್ತು ಧ್ರುವ ಸರ್ಜಾ ಅವರ ಬಗ್ಗೆ ಮಾತನಾಡಿಲ್ಲ, ನನ್ನ ಮೇಲೆ ಷಡ್ಯಂತ್ರ ನಡೆದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಮಹರಾಷ್ಟ್ರ ಚುನಾವಣೆಯಲ್ಲಿ ‘ಮ್ಯಾಚ್​ ಫಿಕ್ಸಿಂಗ್​’; ಚುನಾವಣ ಆಯೋಗದ ವಿರುದ್ದ ರಾಹುಲ್​ ಗಂಭೀರ ಆರೋಪ

ಅತ್ಯಾಚಾರ ಕೇಸ್​ನಲ್ಲಿ ಜೈಲು ಸೇರಿ, ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ನಟ ಮಡೆನೂರು ಮನು, ವೈರಲ್​ ಆಗಿದ್ದ ವಿವಾದಾತ್ಮಕ ಆಡಿಯೊ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. “ಶಿವಣ್ಣ, ದರ್ಶನ್ ಮತ್ತು ಧ್ರುವ ಸರ್ಜಾ ಬಗ್ಗೆ ವೈರಲ್​ ಆಗಿರುವ ಆಡಿಯೋ ನನ್ನದಲ್ಲ. ನಾನು ಶಿವಣ್ಣ, ದರ್ಶನ್ ಮತ್ತು ಧ್ರುವ ಬಗ್ಗೆ ಮಾತನಾಡಿಲ್ಲ. ನಾನು ಮೊದಲು ದೊಡ್ಡವರನ್ನ(ಶಿವಣ್ಣ) ಭೇಟಿ ಮಾಡಿ, ಸತ್ಯವನ್ನು ಅವರಿಗೆ ವಿವರಿಸಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ :ಸಿದ್ದರಾಮಯ್ಯ ಒಬ್ಬ ಹೇಡಿ, ಅಸಹಾಯಕ ಮುಖ್ಯಮಂತ್ರಿ; ಭಾಸ್ಕರ್​ ರಾವ್​ ಆಕ್ರೋಶ

ಪಕ್ಕಾ ಪ್ಲಾನ್​ ಮಾಡಿ ನನ್ನ ಜೀವನ ಹಾಳು ಮಾಡಿದ್ದಾರೆ..!

ಮುಂದುವರಿದು ಮಾತನಾಡಿದ ಮಡೆನೂರು ‘ಮನು ನನ್ನ ಮೂರು ವರ್ಷಗಳ ಶ್ರಮವನ್ನು ಹಾಳು ಮಾಡಿದ್ದಾರೆ. ಐದಾರು ಮಂದಿ ಪಕ್ಕಾ ಪ್ಲಾನ್ ಮಾಡಿ ನನ್ನ ಮುಗಿಸಿದ್ರು. ಸಾಕಷ್ಟು ಅಡೆತಡೆಗಳ ನಡುವೆ ಸಿನಿಮಾ ರಿಲೀಸ್ ಆಯ್ತು. ನನ್ನ ವಿರುದ್ಧ ಪ್ರತಿ ಹಂತದಲ್ಲಿಯು ಷಡ್ಯಂತ್ರ ನಡೆಯಿತು. ಸಿನಿಮಾ ರಿಲೀಸ್​ಗು ಮೊದಲು ಕುಣಿಗಲ್ ಬಳಿ ಮೊಟ್ಟೆ ಹೊಡೆದ್ರು. ನನ್ನ ಮೇಲೆ ಹಲ್ಲೆ ನಡೆಸಿ ಬಟ್ಟೆಗಳನ್ನು ಹರಿದರು. ಕೊನೆಗೆ ನನ್ನ ಜೊತೆಯಲ್ಲಿದ್ದವರೇ ಕೇಸ್ ಮಾಡಿಸಿದರು. ಇದನ್ನೂ ಓದಿ :ಬಕ್ರೀದ್​ ಸಂಭ್ರಮ; 5 ಲಕ್ಷ ಮೊತ್ತಕ್ಕೆ ಮೇಕೆ ಮಾರಾಟ ಮಾಡಿದ ರೈತ ಫುಲ್​ ಖುಷ್​

ನನ್ನ ವಿರುದ್ದ ಷಡ್ಯಂತ್ರ ರೂಪಿಸಲು 50 ಸಾವಿರ ಹಣ ಖರ್ಚು ಮಾಡಿ ಆಡಿಯೋ ರೆಡಿ ಮಾಡಿದ್ದರು.
ನಿನ್ನ ಕಥೆ ಮುಗಿಸುವುದಾಗಿ ಧಮ್ಕಿ ಹಾಕಿದ್ರು. ಸಾಮಾನ್ಯ ಹಳ್ಳಿಹೈದ ಮೂರು ವರ್ಷ ಹಗಲಿರುಳು ಕಷ್ಟಪಟ್ಟಿದ್ದೆ
ಆದರೆ ಅದನೆಲ್ಲಾ ಮುಗಿಸಿ ಬಿಟ್ಟರು. ನಾನು ಬಡವ, ಅದು ನನ್ನ ಆಡಿಯೋ ಅಲ್ಲ ಎಂದು ಚಾಲೆಂಜ್​ ಮಾಡಲು ನನಗೆ ಆಗಲ್ಲ. ಉಳಿದಂತೆ ನಾನು ಅತ್ಯಾಚಾರ ಕೇಸ್​ನಲ್ಲಿ ಕಾನೂನು ಹೋರಾಟ ಮಾಡ್ತೀನಿ, ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದು ಹೇಳಿದರು.

Exit mobile version