Site icon PowerTV

ಅಕ್ರಮ ಸಂಬಂಧಕ್ಕೆ ಸಹಾಯ; ಗುಪ್ತ ರೋಗ ಬಂದಿದ್ದಕ್ಕೆ ಸ್ನೇಹಿತನಿಗೆ ಗುಂಡಿ ತೋಡಿದ ಗೆಳೆಯ

ರಾಯಚೂರು: ಪ್ರಾಣ ಸ್ನೇಹಿತನೇ ತನ್ನ ಸ್ನೇಹಿತನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದ್ದು. ಕೊಲೆಯಾದ ವ್ಯಕ್ತಿಯನ್ನು ಬಸನಗೌಡ ಎಂದು ಗುರುತಿಸಲಾಗಿದೆ. ಇನ್ನು ಸ್ವಂತ ಸ್ನೇಹಿತನನ್ನೆಕೊಲೆ ಮಾಡಿದ ಆರೋಪದ ಮೇಲೆ ಶರಣ ಬಸವ ಎಂದು ಗುರುತಿಸಲಾಗಿದೆ. ಇದನ್ನೂ ಓದಿ :ನಟ ಕಾಡ ನಟರಾಜ್ ಅಭಿನಯದ ‘ಕರಿಕಾಡ’ ಚಿತ್ರದ ಟೈಟಲ್ ಟೀಸರ್ ಬಿಡುಗಡೆ

ರಾಯಚೂರು ಜಿಲ್ಲೆಯ, ಲಿಂಗಸುಗೂರು ತಾಲ್ಲೂಕಿನ, ಯರಗುಂಟಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಮೃತ ಬಸನ ಗೌಡ ಮತ್ತು ಶರಣಬಸವ ಇಬ್ಬರು ಬಾಲ್ಯದಿಂದಲೇ ಆತ್ಮೀಯ ಗೆಳಯರಾಗಿದ್ದರು. ಆದರೆ ಇತ್ತೀಚೆಗೆ ಬಸನಗೌಡ ಯರಗಂಟಿ ಗ್ರಾಮದಲ್ಲಿದ್ದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದನು. ಜೊತೆಗೆ ಕೋತಿ ತಾನೂ ಕೆಡುವುದಲ್ಲದೇ ವನವನ್ನು ಕೆಡಿಸಿತು ಅನ್ನೋ ಹಾಗೆ, ತನ್ನ ಗೆಳೆಯನಿಗೂ ಮಹಿಳೆ ಜೊತೆ ಸಹವಾಸ ಬೆಳೆಸುವಂತೆ ಒತ್ತಾಯಿಸಿದ್ದನು. ಇದನ್ನೂ ಓದಿ :ಮಹರಾಷ್ಟ್ರ ಚುನಾವಣೆಯಲ್ಲಿ ‘ಮ್ಯಾಚ್​ ಫಿಕ್ಸಿಂಗ್​’; ಚುನಾವಣ ಆಯೋಗದ ವಿರುದ್ದ ರಾಹುಲ್​ ಗಂಭೀರ ಆರೋಪ

ಇದಕ್ಕೆ ಒಪ್ಪಿದ ಶರಣಬಸವ ಮಹಿಳೆಯೊಂದಿಗೆ ಸಂಬಂಭವಿಟ್ಟುಕೊಂಡಿದ್ದನು. ಇದರಿಂದ ಇತ್ತೀಚೆಗೆ ಶರಣಬಸವನಿಗೆ ಯಾವುದೋ ಗುಪ್ತ ರೋಗ ಅಂಟಿತ್ತಂತೆ. ಆದರೆ ಶರಣ ಬಸವ ತನಗೆ ಬಂದಿರುವ ಈ ರೋಗಕ್ಕೆ ಸ್ನೇಹಿತ ಬಸವಗೌಡನೇ ಕಾರಣ ಎಂಬ ತೀರ್ಮಾನಕ್ಕೆ ಬಂದಿದ್ದನು. ಇದೇ ಕಾರಣಕ್ಕೆ ಸ್ನೇಹಿತನ ಕೊಲೆಗೂ ಸಂಚು ರೂಪಿಸಿದ್ದನು. ನಾಲ್ಕೈದು ಭಾರಿ ಕೊಲೆ ಮಾಡಲು ಯತ್ನಿಸಿ ವಿಫಲನಾಗಿದ್ದ.

ಸ್ನೇಹಿತ ಬಸನಗೌಡನನ್ನು ಕೊಲೆ ಮಾಡಲು ತೀರ್ಮಾನಿಸಿದ್ದ ಶರಣಬಸವ ನಿನ್ನೆ ಜಮೀನಲ್ಲಿ ನೇಗಿಲಿಗೆ ಬಳಸೋದಕ್ಕೆ ಕಟ್ಟಿಗೆ ಕಡೆದಿಟ್ಟಿರುವೆ ತೆಗೆದುಕೊಂಡು ಬರೋಣ ಬಾ ಎಂದು ಕರೆದಿದಾನೆ. ಇದಕ್ಕೆ ಒಪ್ಪಿದ ಬಸನಗೌಡ ಎಂದಿನಂತೆ ಗೆಳಯನ ಜೊತೆ ಜಮೀನಿಗೆ ಹೋಗಿದ್ದಾನೆ. ಈ ವೇಳೆ ಮೂತ್ರ ವಿಸರ್ಜನೆಗೆ ಎಂದು ಹೋಗಿದ್ದ ಬಸನಗೌಡನಿಗೆ ಹಿಂದಿನಿಂದ ಕೊಡಲಿಯಲ್ಲಿ ಹೊಡೆದು ಕೊಲೆ ಮಾಡಿದ್ದಾನೆ. ಇದನ್ನೂಓದಿ :ನಾನು ಶಿವಣ್ಣ, ದರ್ಶನ್ ಮತ್ತು ಧ್ರುವ ಬಗ್ಗೆ ಮಾತನಾಡಿಲ್ಲ; ಜೈಲಿನಿಂದ ಹೊರಬರುತ್ತಲೆ ಸ್ಪಷ್ಟನೆ ಕೊಟ್ಟ ಮನು

ಪೊಲೀಸ್​ ತನಿಖೆ..!

ರಾತ್ರಿ ಕಳೆದರು ಬಸನಗೌಡ ಮನೆಗೆ ಬರದಿದ್ದಾಗ, ಹುಡುಗಲು ಶುರುಮಾಡಿದ ಕುಟುಂಬಸ್ಥರಿಗೆ ಬಸನಗೌಡ ಶವ ಜಮೀನಿನಲ್ಲಿ ಬಿದ್ದಿರುವುದು ಕಂಡು ಬಂದಿತ್ತು. ಕೂಡಲೇ ಗ್ರಾಮಸ್ಥರು ಲಿಂಗಸಗೂರು ಪೊಲೀಸರಿಗೆ ಮಾಹಿತಿ ನೀಡಿದ್ದು. ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸರು ಮತ್ತು ಶ್ವಾನದಳದವರು ತನಿಖೆ ಆರಂಭಿಸಿದ್ದರು. ಇದನ್ನೂ ಓದಿ :ಸಿದ್ದರಾಮಯ್ಯ ಒಬ್ಬ ಹೇಡಿ, ಅಸಹಾಯಕ ಮುಖ್ಯಮಂತ್ರಿ; ಭಾಸ್ಕರ್​ ರಾವ್​ ಆಕ್ರೋಶ

ಶ್ವಾನದಳದ ಶ್ವಾನಗಳ ಮೃತದೇಹದ ವಾಸನೆ ಆಧರಿಸಿ ಘಟನೆ ನಡೆದ ಒಂದು ಕಿ,ಮೀ ದೂರದಲ್ಲಿದ್ದ ಕೊಡಲಿಯನ್ನ ಹುಡುಕಿದ್ದವು. ಅಲ್ಲಿಂದ ನೇರವಾಗಿ ಹಂತಕನ ಮನೆಗೆ ಹೋದ ಶ್ವಾನಗಳು ಹಂತಕನ ಮನೆ ಮುಂದೆ ಬೊಗಳುತ್ತ ನಿಂತಿವೆ. ಅಷ್ಟರಲ್ಲಿ ಪೊಲೀಸರಿಗೆ ಕೊಲೆಗಾರನ ಕುರಿತು ಸ್ಪಷ್ಟ ಮಾಹಿತಿ ದೊರೆತಿದ್ದು. ಲಿಂಗಸಗೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version