Site icon PowerTV

ಮಗನನ್ನು ಕಳೆದುಕೊಂಡ ಭೂಮಿಕ್​ ತಂದೆ ಆಕ್ರಂದನ; ಸಮಾಧಿ ಮೇಲೆ ಬಿದ್ದು ಗೋಳಾಟ

ಹಾಸನ: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಯುವಕ-ಯುವತಿಯರು ಸಾವೀಗಿಡಾಗಿದ್ದು. ಮೃತರ ಕುಟುಂಬದ ಗೋಳು ಹೇಳತೀರಾದಾಗಿದೆ. ಮಕ್ಕಳನ್ನ ನೆನೆದು ಹೆತ್ತವರು ಕಣ್ಣಿರಿಡುತ್ತಿದ್ದು. ಹಾಸನದ ಭೂಮಿಕ್​ ತಂದೆ ಮಗನ ಸಮಾಧಿ ಮುಂದೆ ಗೋಳಾಡುತ್ತಿರುವುದು ಎಂತವರ ಕಲ್ಲು ಹೃದಯವನ್ನು ಕರಗಿಸುವಂತಿದೆ.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕುಪ್ಪಗೋಡು ಗ್ರಾಮದ ಲಕ್ಷ್ಮಣ್ ತಮ್ಮ ಮಗನನ್ನು ಕಳೆದುಕೊಂಡಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಸ್ವಂತ ಉದ್ಯಮ ಮಾಡಿಕೊಂಡು ಸಾಕಷ್ಟು ಸಂಪಾದನೆ ಮಾಡಿ ದೊಡ್ಡ ಮಟ್ಟಕ್ಕೆ ಬಂದಿದ್ದ ಲಕ್ಷ್ಮಣ್​ ಮಗನಿಗಾಗಿ ಸಾಕಷ್ಟು ಕನಸು ಕಂಡಿದ್ದರು, ಮಗನೂ ಕೂಡ ಎಂದು ತಂದೆಗೆ ವಿರುದ್ದವಾಗಿ ಮಾತನಾಡದೆ, ತಂದೆಯ ಮಾರ್ಗದರ್ಶನದಂತೆ ನಡೆಯುತ್ತಿದ್ದನು. ಇದನ್ನೂ ಓದಿ:ಭೀಕರ ಕಾಲ್ತುಳಿತ ಪ್ರಕರಣ; ಕೆಎಸ್​ಸಿಎ ಕಾರ್ಯದರ್ಶಿ, ಖಜಾಂಜಿ ರಾಜೀನಾಮೆ

ಆದರೆ ಕಳೆದ ಜೂನ್​ 4ರಂದು ಚಿನ್ನಸ್ವಾಮೀ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಭೂಮಿಕ್​ ಸಾವನ್ನಪ್ಪಿದ್ದನು. ಅಂದಿನಿಂದ ಮಗ ಇಲ್ಲದನ್ನು ನೆನೆದು ಕಣ್ಣೀರಿಡುತ್ತಿರುವ ಭೂಮಿಕ್​ ತಂದೆ. ಮಗನ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ. ಕಣ್ಣೀರುಡುತ್ತಿದ್ದಾರೆ. ಮಗನ ಸಮಾಧಿಯ ಮೇಲೆ ಬಿದ್ದು ಹೊರಳಾಡಿರುವ ಭೂಮಿಕ್​ ತಂದೆ ಆಕ್ರಂದನ ಮುಗಿಲು ಮುಟ್ಟಿದ್ದು. ಈ ಪರಿಸ್ಥಿತಿ ಯಾವ ತಂದೆಗೂ ಬರಬಾರದು ಎಂದು ಗೋಳಾಡಿದ್ದಾರೆ. ಇದನ್ನೂ ಓದಿ:ಅನೈತಿಕ ಸಂಬಂಧಕ್ಕೆ ಅಡ್ಡಿ; ವಿಷ ಹಾಕಿ ಕುಟುಂಬವನ್ನೇ ಮುಗಿಸಲು ಪ್ಲಾನ್​ ರೂಪಿಸಿದ ಖತರ್ನಾಕ್​ ಪತ್ನಿ

Exit mobile version