ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತಕ್ಕೆ ರಾಜ್ಯ ಸರ್ಕಾರ ಪೊಲೀಸರನ್ನ ಹೊಣೆಯಾಗಿ ಮಾಡಿದ್ದು. ಪೊಲೀಸ್ ಕಮಿಷನರ್ ಬಿ. ದಯಾನಂದ ಸೇರಿದಂತೆ ಐವರು ಪ್ರಮುಖ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಘಟನೆಗೆ ವಿಪಕ್ಷಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು. ವಿಪಕ್ಷ ನಾಯಕ ಆರ್ ಅಶೋಕ್ “ಪೋಟೋ ಶೂಟ್ ಮಾಡಿಸಲು ಸರ್ಕಾರ ಕಾರ್ಯಕ್ರಮ ಆಯೋಜನೆ ಮಾಡಿತ್ತು” ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:ಕಂಟೈನರ್ ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ; ಮೂವರು ಸಾ*ವು
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಬಿಜೆಪಿ ರಾಜ್ಯಧ್ಯಕ್ಷ ವಿಜೇಯಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ಛಲವಾದಿ ನಾರಾಯಣಸ್ವಾಮಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು. “ರಾಜ್ಯದ ಮುಖ್ಯಮಂತ್ರಿ ಅಂದರಾಗಿದ್ದಾರೆ, ಅದಕ್ಕೆ ಅವರು ಅಂದ ದರ್ಬಾರ ನಡೆಸುತ್ತಿದ್ದಾರೆ. ಮ್ಯಾಚ್ ಗೆದ್ದಿದ್ದು RCB ತಂಡವಾದರೂ, ಪೊಟೋ ತೆಗೆಸಿಕೊಂಡಿದ್ದು KPCC ತಂಡ. ಈ ವಿಷಯಕ್ಕೆ ಸಿಎಂಗೆ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಕೊಡಬೇಕು ಎಂದು ಹೇಳಿದರು. ಇದನ್ನೂ ಓದಿ:ಕಾಲ್ತುಳಿತ ಪ್ರಕರಣ; ಆರ್ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ಸೇರಿದಂತೆ ನಾಲ್ವರನ್ನು ಬಂಧಿಸಿದ ಪೊಲೀಸರು
ಮುಂದುವರಿದು ಮಾತನಾಡಿದ ಡಿ,ಕೆ ಆರ್. ಅಶೋಕ್ “ಕ್ರಿಕೆಟ್ ಬಗ್ಗೆ ಎಬಿಸಿಡಿ ಸಹ ಗೊತ್ತಿಲ್ಲ ಇವರಿಗೆ, ಇವರಿಗೆ ACB ರಚಿಸೋದು ಮಾತ್ರ ಗೊತ್ತಿದೆ. ಆಟಗಾರರನ್ನು ಇಲ್ಲಿಗೆ ಕರೆಸಿ ಫ್ಯಾಮಿಲಿ ಪೋಟೊ ತೆಗೆಸಿಕೊಂಡಿದ್ದಾರೆ. ಮ್ಯಾಚ್ ಆಡಿ ಕಪ್ ಗೆಲ್ಲಿಸಿದ್ದು ಆಟಗಾರರಾದರೂ ಕಪ್ ಎತ್ತಿ ಓಡಾಡಿದವರು ಕಾಂಗ್ರೆಸಿಗರು. ಆಟಗಾರರಿಗೆ ಕಪ್ ಸಿಗಲೇ ಇಲ್ಲ ಎಂದು ವ್ಯಂಗ್ಯವಾಡಿದರು.
ಪೊಲೀಸ್ ಕಮಿಷನರ್ ಅಮಾನತಿಗೆ ಆಕ್ರೋಶ..!
ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸ್ ಕಮಿಷನರ್ ಸೇರಿದಂತೆ ಐವರು ಪ್ರಮುಖ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು. ಇದಕ್ಕೆ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕಾಲ್ತುಳಿತ ಉಂಟಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಹೊತ್ತೊಯ್ದಿದ್ದು ಪೊಲೀಸ್ ಅಧಿಕಾರಿಗಳು. ಅಲ್ಲಿ ಸಿಎಂ, ಡಿಸಿಎಂ ಯಾರು ಬಂದಿರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ:ಉತ್ತರಾಖಂಡ್; ಸ್ವಂತ ಮಗಳ ಮೇಲೆ ಬಾಯ್ಫ್ರೆಂಡ್ನಿಂದ ಅತ್ಯಾಚಾರ ಮಾಡಿಸಿದ ತಾಯಿ..!
ಕಾಲ್ತುಳಿತಗೊಂಡು ತೀವ್ರವಾಗಿ ಗಾಯಗೊಂಡಿದ್ದ ಜನರನ್ನು ಪೊಲೀಸರು ಎತ್ಕೊಂಡು ಆಸ್ಪತ್ರೆಗೆ ಹೋದರು. ಅಲ್ಲಿ ಡಿಸಿಎಂ, ಸಿಎಂ ಯಾರು ಬರಲಿಲ್ಲ. ಉಸಿರಾಡಲು ಸಾಧ್ಯವಾಗದೆ, ಕಷ್ಟಪಡುತ್ತಿದ್ದವರ ರಕ್ಷಣೆಗೆ ಬಂದಿದ್ದ ಪೊಲೀಸರು. ಆದರೆ ನೀವು ಪೋಟೋ ಕ್ಲಿಕ್ ಮಾಡಿಕೊಂಡಿದ್ದೀರಾ. ಈಗ ನೋಡಿದರೆ ಪೊಲೀಸರ ಮೇಲೆ ಕ್ರಮ ತೆಗೆದುಕೊಂಡಿದ್ದೀರಾ. ಪೊಲೀಸರನ್ನು ಹರಕೆ ಕುರಿ ಮಾಡಲು ಹೊರಟಿದ್ದೀರಾ ಎಂದು ಆರ್ ಅಶೋಲ್ ಕಿಡಿಕಾರಿದರು.


