ಉತ್ತರಾ​ಖಂಡ್​; ಸ್ವಂತ ಮಗಳ ಮೇಲೆ ಬಾಯ್​ಫ್ರೆಂಡ್​​ನಿಂದ ಅತ್ಯಾಚಾರ ಮಾಡಿಸಿದ ತಾಯಿ..!

ಡೆಹ್ರಾಡೂನ್‌: ಬಿಜೆಪಿ ಕಾರ್ಯಕರ್ತೆಯೊಬ್ಬಳು ತನ್ನ ಬಾಯ್​ಫ್ರೆಂಡ್​ ಹಾಗೂ ಆತನ ಸ್ನೇಹಿತನಿಂದಲೇ ಸ್ವಂತ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ಮಾಡಿಸಿರುವ ಘಟನೆ ಉತ್ತರ ಕಾಂಡ್​ನ ಹರಿದ್ವಾರದಲ್ಲಿ ನಡೆದಿದ್ದು. ಪೊಲೀಸರು ಆರೋಪಿ ತಾಯಿ ಮತ್ತು ಆಕೆಯ ಬಾಯ್​ಫ್ರೆಂಡ್ಸ್​ಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: Stand with B Dayanand ; ಸರ್ಕಾರದ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರುತ್ತಾರೆ, ಆದ್ರೆ ಕೆಟ್ಟ ತಾಯಿ ಇರುವುದಿಲ್ಲ ಎಂಬ ಮಾತಿಗೆ ಅಪಚಾರವೆಂಬ ಘಟನೆ ನಡೆದಿದ್ದು. ಉತ್ತರಖಂಡ್​ನ ಹರಿದ್ವಾರದ ಬಿಜೆಪಿ ಮಹಿಳಾ ಮೋರ್ಚಾದ ಮಾಜಿ ಅಧ್ಯಕ್ಷೆ ಅನಾಮಿಕಾ ಶರ್ಮಾ ತನ್ನ 13 ವರ್ಷದ ಮಗಳ ಮೇಲೆಯೇ ಅತ್ಯಾಚಾರ ಮಾಡಿಸಿದ್ದಾಳೆ. ಘಟನೆ ಸಂಬಂಧ ಪೊಲೀಸರು ತಾಯಿ ಅನಾಮಿಕಾ ಮತ್ತು ಆಕೆಯ ಪ್ರಿಯಕರ ಸುಮಿತ್​ ಪತ್ವಾಲ್​ ಮತ್ತು ಆತನ ಸ್ನೇಹಿತ ಶುಭಂ ಎಂಬಾತನನ್ನು ಬಂಧಿಸಿದ್ದಾರೆ. ಘಟನೆ ಬೆಳಕಿಗೆ ಬಂದ ಬಳಿಕ ಬಿಜೆಪಿ ಪಕ್ಷದಿಂದ ಆಕೆಯನ್ನು ವಜಾ ಮಾಡಲಾಗಿದೆ.

ಏನಿದು ಘಟನೆ?

ಅನಾಮಿಕಾ ಶರ್ಮಾ 2024ರ ವರೆಗೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದಳು. ನಂತರ ಪಕ್ಷದ ಸದಸ್ಯೆ ಆಗಿ ಮುಂದುವರಿದಿದ್ದಳು. ಆಕೆ ತನ್ನ ಗಂಡನಿಂದ ಬೇರ್ಪಟ್ಟಿದ್ದಳು. ಆದರೆ ಮಗಳು ಅಪ್ಪನೊಂದಿಗೆ ಉಳಿದುಕೊಂಡಿದ್ದಳು. ಅಪರೂಪಕ್ಕೆ ತಾಯಿ ಬಳಿ ಬರುತ್ತಿದ್ದಳು. ಈ ವೇಳೆ ಅನಾಮಿಕಾ, ಸುಮಿತ್‌ನ ಪ್ರೇಮ ಸಂಪಾದಿಸಿ ಆತನ ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದಳು. ಇದನ್ನೂ ಓದಿ: ಅನುಮಾನಸ್ಪದ ರೀತಿಯಲ್ಲಿ ಮಂಗಳೂರಿನ ಬಿಜೆಪಿ ಮುಖಂಡ ಸಾವು; ಸಾವಿನ ಸುತ್ತ ಅನುಮಾನದ ಹುತ್ತ

ಜನವರಿಯಿಂದ ಮಾರ್ಚ್‌ ವೇಳೆ ಹರಿದ್ವಾರ, ಬೃಂದಾವನ ಮತ್ತು ಆಗ್ರಾದಲ್ಲಿ ಹಲವು ಬಾರಿ ಮಗಳ ಮೇಲೆ ಸುಮಿತ್ ಹಾಗೂ ಆತನ ಸ್ನೇಹಿತ ಶುಭಂನಿಂದ ಅತ್ಯಾಚಾರ ಮಾಡಿಸಿದ್ದಳು. ಈ ವಿಷಯವನ್ನ ತಂದೆಗೆ ಹೇಳದಂತೆ ಬೆದರಿಕೆಯೂ ಹಾಕಿದ್ದಳು ಎಂದು ವರದಿಗಳಿಂದ ತಿಳಿದುಬಂದಿದೆ.

ಮಂಗಳವಾರ ನಡೆದ ಘಟನೆ ಬಗ್ಗೆ ಅಪ್ರಾಪ್ತೆ ತನ್ನ ತಂದೆಗೆ ಮಾಹಿತಿ ನೀಡಿದ್ದಳು. ಪರಿಣಾಮ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆ ಸೇರಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ಆರ್​​ಸಿಬಿ ವಿರುದ್ದ FIR ದಾಖಲು

RELATED ARTICLES

Related Articles

TRENDING ARTICLES