ಖ್ಯಾತ ಬಹುಭಾಷ ನಟ ಶೈನ್ ಟಾಮ್ ಚಾಕೋ ಪ್ರಾಯಣಿಸುತ್ತಿದ್ದ ಕಾರು ಅಪಘಾತವಾಗಿದ್ದು. ದುರ್ಘಟನೆಯಲ್ಲಿ ನಟನ ಶೈನ್ ಚಾಕೋ ಅವರ ತಂದೆ ಸಿ.ಪಿ ಚಾಕೋ ನಿಧನರಾಗಿದ್ದಾರೆ. ಇನ್ನು ನಟ ಮತ್ತು ಅವರ ತಾಯಿ ಗಂಭೀರವಾಗಿ ಗಾಯಗೊಂಡಿದ್ದು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಮಿಳುನಾಡಿನ ಪಾಲಕೋಡ್ ಬಳಿಯ ಪರಯೂರ್ನಲ್ಲಿ ಶುಕ್ರವಾರ ಬೆಳಿಗ್ಗೆ ಈ ಅಪಘಾತ ಸಂಭವಿಸಿದ್ದು. ಶೈನ್ ಅವರ ಕಾರು ಟ್ರಕ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಶೈನ್ ತಂದೆ ಸಿ.ಪಿ ಚಾಕೋ ಸ್ಥಳದಲ್ಲೇ ಸಾವನ್ನಪ್ಪಿದ್ದು. ಶೈನ್ ಟಾಮ್ ಚಾಕೊ ಮತ್ತು ಅವರ ತಾಯಿಗೂ ಗಾಯಗಳಾಗಿವೆ. ಕೂಡಲೇ ಅವರನ್ನು ಧರ್ಮಪುರಿ ಬಳಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ :KSCA ಸಿಬ್ಬಂದಿಗಳಿಗೆ ಬಿಗ್ ರಿಲೀಫ್; ಬಲವಂತದ ಕ್ರಮ ಬೇಡ ಎಂದ ಹೈಕೋರ್ಟ್
Malayalam actor Shine Tom Chacko’s father, CP Chacko passed away in a road accident near Hogenakkal in Tamil Nadu’s Dharmapuri district
Shine was injured in the crash, sustaining a wound on his right hand. Family was travelling from Ernakulam to Bengaluru when their car met with… pic.twitter.com/lZ2aroURfo
— Nabila Jamal (@nabilajamal_) June 6, 2025
ಶೈನ್ ಟಾಮ್ ಚಾಕೊ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಅಲ್ಲದೇ, ಅಪಘಾತದಲ್ಲಿ ಜಖಂ ಆಗಿರುವ ಕಾರಿನ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅವರ ಸದ್ಯದ ಪರಿಸ್ಥಿತಿ ಬಗ್ಗೆ ಅಪ್ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಅಪಘಾತದಲ್ಲಿ ನಿಧನರಾದ ಸಿಪಿ ಚಾಕೊ ಅವರಿಗೆ 70 ವರ್ಷ ವಯಸ್ಸಾಗಿತ್ತು. ಇದನ್ನೂ ಓದಿ :ಒತ್ತಡ ಹೇರಿ ಕಾರ್ಯಕ್ರಮ ಆಯೋಜನೆ; ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದ್ ರಾಜು ತಲೆದಂಡ
ತಂದೆಯನ್ನು ವೈದ್ಯಕೀಯ ತಪಾಸಣೆಗಾಗಿ ತ್ರಿಷುರ್ನಿಂದ ಬೆಂಗಳೂರಿಗೆ ಶೈನ್ ಟಾಮ್ ಚಾಕೊ ಕರೆದುಕೊಂಡು ಬರುತ್ತಿದ್ದರು. ಅವರ ಕಾರು 80ರಿಂದ 100 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿತ್ತು. ಎದುರಿಗೆ ಚಲಿಸುತ್ತಿದ್ದ ಟ್ರಕ್ ಸಡನ್ ಆಗಿ ಲೇನ್ ಬದಲಾಯಿಸಿದ್ದರಿಂದ ಅಪಘಾತ ಸಂಭವಿಸಿತು ಎನ್ನಲಾಗಿದೆ. ಈ ಅಪಘಾತದಲ್ಲಿ ಶೈನ್ ಟಾಮ್ ಚಾಕೊ ಅವರ ಎಡಗೈ ಮೂಳೆ ಮುರಿದಿದೆ. ಇದನ್ನೂ ಓದಿ :ಪೊಲೀಸ್ ಅಧಿಕಾರಿಗಳ ತಲೆದಂಡ; ಗುಪ್ತಚರ ಇಲಾಖೆ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಎತ್ತಂಗಡಿ
ನಟ ಶೈನ್ ಚಾಕೋ ಮೇಲೆ ಇತ್ತೀಚೆಗೆ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಡ್ರಗ್ಸ್ ಕೇಸ್ನಲ್ಲಿ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಅಲ್ಲದೇ ಕೆಲವು ನಟಿಯರು ಕೂಡ ಶೈನ್ ಟಾಮ್ ಚಾಕೊ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದರು.



Thanks for the auspicious writeup. It actually was a leisure account it. Look complicated to more delivered agreeable from you! However, how could we communicate?
Escort Agencies Brazil
ко ланта ко лант